2017-18 ಸಾಲಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯು ದಿನಾಂಕ 6-9-2017 ಮತ್ತು 7-9-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗವು ಸಮಗ್ರ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಕಿರಿಯ ವಿಭಾಗದ (1-4) ವಿದ್ಯಾರ್ಥಿಗಳ ವಿವರ
ಪ್ರಥಮ ಸ್ಥಾನಗಳು ಕ್ರಮವಾಗಿ ತ್ರಿಶೂಲ್.ಎನ್.ಡಿ(4ನೇ) ಅಜೇಯರಾಮ್(4ನೇ), ಸುಶ್ಮಿತಾ.ಬಿ (4ನೇ), ಮಹಿತ್ ಎಮ್(4ನೇ), ಶ್ರೇಯಸ್(3ನೇ), ಪ್ರತ್ಯೂಶ್ ಶೆಟ್ಟಿ(3ನೇ), ರಸಪ್ರಶ್ನೆ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದೇಶಭಕ್ತಿಗೀತೆಯಲ್ಲಿ ಪ್ರಕೃತಿ ವಿ. ರೈ(4ನೇ), ನವೀನ್(4ನೇ), ನಿರೀಕ್ಷಾ(4ನೇ), ಶ್ರೀಜಿತ್(3ನೇ), ಅಮೃತ ಬಿ.ಎ(3ನೇ), ಜೀವಿಕಾ(3ನೇ) ದ್ವಿತೀಯ ಸ್ಥಾನ, ಸಂಸ್ಕೃತ ಕಂಠಪಾಠ-ಸಮನ್ವಿತ ಭಟ್(3ನೇ) ದ್ವಿತೀಯ ಸ್ಥಾನ, ಭಕ್ತಿಗೀತೆಯಲ್ಲಿ ಜ್ಞಾನ(4ನೇ)-ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಹಿರಿಯ ವಿಭಾಗದ (5-7) ವಿದ್ಯಾರ್ಥಿಗಳ ವಿವರ
ಹಿಂದಿ ಕಂಠಪಾಠ – ಖುಷಿ(7ನೇ)- ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ., ಸಂಸ್ಕೃತ ಧಾರ್ಮಿಕ ಪಠಣ-ತನ್ಮಯಿ.ಯು(6ನೇ)-ತೃತೀಯ, ಛದ್ಮವೇಷ -ಪುಣ್ಯ(6ನೇ)-ತೃತೀಯ, ಭಕ್ತಿಗೀತೆ-ರಂಜಿತ(7ನೇ)-ತೃತೀಯ, ದೇಶಭಕ್ತಿಗೀತೆ-ಆಶಿತಾ(7ನೇ), ಹಿತಾ ಕಜೆ(7ನೇ), ವರ್ಷ.ಕೆ(7ನೇ), ಸನ್ನಿದಿ ಹೆಬ್ಬಾರ್(6ನೇ), ಪಲ್ಲವಿ(6ನೇ), ನೇಹಾ ಜಿ.ಹೆಗಡೆ(6ನೇ)- ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಪ್ರೌಢ ಶಾಲಾ ವಿದ್ಯಾರ್ಥಿಗಳ ವಿವರ
ಪ್ರೌಢ ಶಾಲಾ ವಿಭಾಗದಲ್ಲಿ ಸನ್ನಿಧಿ ಕಜೆ (9ನೇ) ಗಝ್ಹಲ್, ಖುಷಿ (8ನೇ) ವೈಯಕ್ತಿಕ ಯಕ್ಷಗಾನದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜಿತ್ ಕೃಷ್ಣ ಐತಾಳ್ (10ನೇ) ಸಂಸ್ಕೃತ ಧಾರ್ಮಿಕ ಪಠಣ-ದ್ವಿತೀಯ ಸ್ಥಾನ, ರಶ್ಮಿ. ಕೆ.ಪಿ (8ನೇ) ರಂಗೋಲಿ-ತೃತೀಯ ಸ್ಥಾನ, ಹಾಗೂ ರಾಕೇಶ್ ಕೃಷ್ಣ (8ನೇ) ಕನ್ನಡ ಭಾಷಣ-ತೃತೀಯ ಸ್ಥಾನ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್, ದ.ಕ. ಜಿಲ್ಲಾ ಪಂಚಾಯತ್ ಇದರ ವತಿಯಿಂದ ಏರ್ಪಡಿಸಲಾದ ಭಾಷಣ ಸ್ಪರ್ಧೆಯಲ್ಲಿ ಸಿಂಚನಾ ಲಕ್ಷ್ಮಿ (9ನೇ) ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ ರೈ ತಿಳಿಸಿರುತ್ತಾರೆ.