ಸಾರ್ವಜನಿಕ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 22-9-2017 ರಂದು ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್ 2017 ಸ್ಪರ್ಧೆಯು ಮಂಗಳೂರಿನ ಸರೋಜಿನಿ ಮಧುಸೂಧನ ಕುಶೆ ಶಿಕ್ಷಣ ಸಂಸ್ಥೆ, ಅತ್ತಾವರ ಇಲ್ಲಿ ನಡೆಯಿತು.
ಇದರಲ್ಲಿ ನಮ್ಮ ಪ್ರೌಢ ಶಾಲಾ ವಿದ್ಯಾರ್ಥಿಗಳ 2 ತಂಡಗಳು ಭಾಗವಹಿಸಿದ್ದು, 10 ನೇ ತರಗತಿ ವಿದ್ಯಾರ್ಥಿಗಳಾದ ವರುಣ್.ಕೆ (ಅರವಿಂದ ಭಟ್.ಕೆ.ಎಂ ಮತ್ತು ಶುಭಪ್ರಭ, ಮರೀಲ್, ಪುತ್ತೂರು, ಇವರ ಪುತ್ರ) ಮತ್ತು ತೇಜಾ.ಎಸ್.ಎಸ್(ಡಾ.ಶೈಲೇಂದ್ರ ಮತ್ತು ಡಾ.ಶಶಿಕಲಾ, ಉಪ್ಪಿನಂಗಡಿ, ಇವರ ಪುತ್ರ), ಅಕ್ಷಯ ಸುಬ್ರಹ್ಮಣ್ಯ.ಇ (ಶಿವಪ್ರಸಾದ್.ಇ ಮತ್ತು ಗೀತಾಪಾರ್ವತಿ, ಉರ್ಲಾಂಡಿ, ಪುತ್ತೂರು, ಇವರ ಪುತ್ರ), ಮತ್ತು 9 ನೇ ತರಗತಿಯ ಅಚಿಂತ್ಯಕೃಷ್ಣ.ಬಿ (ಅನಂತ ನಾರಾಯಣ.ಬಿ ಮತ್ತು ಶಂಕರಿ.ಬಿ, ಪುತ್ತೂರು ಇವರ ಪುತ್ರ) ಇವರು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು, ಮೈಸೂರಿನಲ್ಲಿ ನಡೆಯಲಿರುವ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.