ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯರ ತಂಡವು ಪ್ರಸ್ತುತಪಡಿಸಿದ ಸೃಷ್ಟಿ -Innovative Method of Seedgrapher ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
8ನೇ ತರಗತಿಯ ರಾಖೇಶ್‌ಕೃಷ್ಣ ತಂಡದ ನಾಯಕನಾಗಿದ್ದು, 8ನೇ ತರಗತಿಯ ಯಶಸ್ವಿ ಶೆಟ್ಟಿ, 7ನೇ ತರಗತಿಯ ಆಶ್ರಯ, ಪ್ರಥಮ ಶೆಣೈ ಮತ್ತು ಅಮೋಘ ಇವರು ವರದಿಯನ್ನು ಸಿದ್ಧಪಡಿಸಿದ್ದರು. ಹಿರಿಯರ ವಿಭಾಗ ತಂಡದಲ್ಲಿ 9ನೇ ತರಗತಿಯ ಸಿಂಚನಲಕ್ಷ್ಮಿ, ಪೂರ್ಣ.ಎಸ್.ಪ್ರಸಾದ್, ಚೈತನ್ಯ, ಶಶಾಂಕ.ಬಿ, ಧ್ಯಾನ್.ಎಸ್.ರಾವ್ ಇವರು ಸಿದ್ಧಪಡಿಸಿದ ಯೋಜನಾ ವರದಿಯುAccident prevention and automatic speed control ಪ್ರಶಂಸೆಗೊಳಪಟ್ಟಿತ್ತು. ವಿಜ್ಞಾನ ಶಿಕ್ಷಕಿಯರಾದ ಸಿಂಧು, ರೇಖಾ,ಶಾಂತಿ, ಶಾರದ ಶೆಟ್ಟಿ, ಸಂಧ್ಯಾ ಮತ್ತು ಶ್ರೀನಿಧಿ ಆಳ್ವ ಮಾರ್ಗದರ್ಶನ ನೀಡಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.