ದಿನಾಂಕ 27-12-2017 ರಂದು ಪುತ್ತೂರು ತಾಲೂಕು ಮಟ್ಟದ 27 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಧರ್ಮಸ್ಥಳ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಮಕ್ಕಳ ಸಾಹಿತಿ ಇವರು ಉದ್ಘಾಟಿಸಿ ನೈತಿಕತೆ ಶಿಕ್ಷಣದ ಅವಿಭಾಜ್ಯ ಅಂಗ ಎಂದರು.
ಅಧ್ಯಕ್ಷತೆಯನ್ನು ಶ್ರೀ ಸತೀಶ್ ಕುಮಾರ್‌ರೈ, ಮುಖ್ಯೋಪಾಧ್ಯಾಯರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇವರು ವಹಿಸಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉತ್ತಮ ಸಂಸ್ಕಾರದ ವಿಚಾರಕ್ಕೆ ಸದಾ ಬೆಂಬಲ ಕೊಡಲಿವೆ ಎಂದರು. ಅತಿಥಿಗಳಾಗಿ ಶ್ರೀ ರಘುರಾಜ ಉಬಾರಡ್ಕ ಶಿಕ್ಷಣ ಪ್ರೇಮಿ, ಶ್ರೀಮತಿ ಮಹಾಲಕ್ಷ್ಮಿ, ಹಿ.ಸಾ.ಶಿ.ಹಾರಾಡಿ, ಕಳೆದ ಹಲವಾರು ವರ್ಷಗಳಿಂದ ಇಡೀ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುವವರು ಡಾ| ಐ.ಶಶಿಕಾಂತ ಜೈನ್ ಶಾಂತಿವನಟ್ರಸ್ಟ್, ನಿರ್ದೇಶಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗುರುಯೋಗ ಸಂಘ, ದ.ಕ.ಜಿಲ್ಲಾ ಕಾರ್ಯದರ್ಶಿ ಶ್ರೀ ರಾಮಣ ರೈ ಇವರು ಸ್ವಾಗತಿಸಿ, ಶ್ರೀಮತಿ ಗೀತಾ , ಹಿಂದಿ ಪ್ರಾಧ್ಯಾಪಕಿ ವಂದಿಸಿ, ಶ್ರೀಮತಿ ಯಶೋಧಕಾರ್ಯಕ್ರಮ ನಿರೂಪಿಸಿದರು.