ದಿನಾಂಕ 29-8-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಇಲ್ಲಿ ತಮ್ಮನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಶಾಲಾ ಬಸ್ ಚಾಲಕರಿಗೆ ಶಾಲಾ ಮಕ್ಕಳು ರಕ್ಷೆಯನ್ನು ಕಟ್ಟುವುದರ ಮೂಲಕ ನಮ್ಮನ್ನು ಸದಾ ರಕ್ಷಿಸಿ ಎಂದು ಆರ್ಶೀವಾದ ಪಡೆದು ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಸಾಮರಸ್ಯ ಸಂಯೋಜಕರಾದ ಶ್ರೀ ಸುರೇಶ್ ಪರ್ಕಳ ಅವರು ನಮ್ಮ ದೇಶದ ಜನರು ಪರಸ್ಪರ ಒಗ್ಗಟ್ಟಿನಿಂದ ದೇಶವನ್ನು ರಕ್ಷಣೆ ಮಾಡಬೇಕು. ನಮ್ಮಲ್ಲಿರುವ ತಕ್ಷಶಿಲ, ಸೋಮನಾಥ ದೇವಾಲಯದ ಅವನತಿಗೆ ನಮ್ಮಲ್ಲಿ ಒಗ್ಗಟ್ಟಿಲ್ಲದ್ದೇ ಕಾರಣ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಬಸ್ ಚಾಲಕರು ಉಪಸ್ಥಿತರಿದ್ದರು. ಅತಿಥಿಗಳು ಭಾರತಮಾತೆಗೆ ರಕ್ಷೆ ಕಟ್ಟಿ ನಾವೆಲ್ಲರೂ ಒಂದೇ ಎಂದು ಸಾರಿದರು. ಸಾಂಪ್ರದಾಯಕವಾಗಿ ತಂಗಿ ಅಣ್ಣನಿಗೆ ಆರತಿಯನ್ನು ಬೆಳಗಿ, ತಿಲಕವನ್ನು ಹಣೆಗಿಟ್ಟು ರಕ್ಷೆಯನ್ನು ಕಟ್ಟಿದರು. ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕಿರಾದ ರೇಷ್ಮಾ, ಕವಿತಾ, ರಮ್ಯ ರಕ್ಷಬಂಧನ ಗೀತೆಯನ್ನು ಹಾಡಿದರು. ಶಿಕ್ಷಕಿರಾದ ಸಾಯಿಗೀತಾ ರಾವ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರಾದ ದೀಪಕ್ ಹಾಗೂ ಶಿಕ್ಷಕ ವೃಂದ ಸಹಕರಿಸಿದರು.