ತಾ. 12-09-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಇಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಶಾಲಾ ’ಸೃಷ್ಟಿ’ ಚಿತ್ರಕಲಾ ವಿಭಾಗದ ಆಶ್ರಯದಲ್ಲಿ ಸಾವಿರದ ಗಣಪತಿ ರಚನೆಯ ವಿಶೇಷ ಕಾರ್ಯಕ್ರಮ ನಡೆಯಿತು.
ಪ್ಲಾಸ್ಟ್-ಪ್ಯಾರಿಸ್, ಪೈಬರ್ ಹಾಗೂ ಇನ್ನಿತರ ರಾಸಾಯನಿಕ ವಸ್ತುವಿನಿಂದ ಆಗುವ ಪರಿಸರ ಮಾಲಿನ್ಯದ ಅರಿವು ಮೂಡಿಸುವ ಸಲುವಾಗಿ ಆವೆ ಮಣ್ಣಿನಿಂದ ಗಣೇಶ ಮೂರ್ತಿ ರಚನೆಯನ್ನು ಕಲಾಶಿಕ್ಷಕರು ಹಾಗೂ ಸೃಷ್ಟಿ ಆರ್ಟ್ ಕ್ಲಬ್ನ ವಿದ್ಯಾರ್ಥಿಗಳ ಮಾರ್ಗದರ್ಶನದ ಮೂಲಕ 3 ರಿಂದ 6 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಗೂಡಿ ಪರಿಸರ ಸ್ನೇಹಿ ಗಣೇಶನನ್ನು ರಚಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ, ಶಾಲಾ ಆಡಳಿತ ಮಂಡಳಿ ಸದಸ್ಯರು, ಮತ್ತು ಶಿಕ್ಷಕ-ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.