ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿ 30-10-2018 ಮತ್ತು 31-10-2018 ರಂದು N-xplorer ಸಂಸ್ಥೆಯಿಂದ ’ವೈಜ್ಞಾನಿಕ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯಾಗಾರ’ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ N-xplorer ಸಂಸ್ಥೆಯ ಪ್ರಬಂಧಕರಾದ ಶ್ರೀಮತಿ ಹನಾ.ಎಮ್.ರವರು 85 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಜಾಗತಿಕ ಸಮಸ್ಯೆಗಳಲ್ಲಿ ಪ್ರಮುಖವಾದ ಆಹಾರ, ನೀರು, ಹಾಗೂ ಶಕ್ತಿ ಈ ವಿಷಯಗಳ ಕುರಿತು ಧನಾತ್ಮಕ ಬದಲಾವಣೆ ತರಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವಲ್ಲಿ ಈ ಕಾರ್ಯಾಗಾರವು ಯಶಸ್ವಿಯಾಯಿತು. ಈ ಎರಡು ದಿನದ ಕಾರ್ಯಾಗಾರದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ವಸಂತಿ ಮತ್ತು ಶಾಲಾ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಶಾರದಾ ಶೆಟ್ಟಿ, ಶ್ರೀಮತಿ ರೇಖಾ ಮತ್ತು ಶ್ರೀಮತಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.