ಶರೀರಕ್ಕೆ ಹೇಗೆ ಉಸಿರು ಮುಖ್ಯವೋ ಅದೇ ರೀತಿ ಭಾರತಕ್ಕೆ ಸಂಸ್ಕೃತ ಭಾಷೆ ಉಸಿರಿನಂತೆ. ಸಂಸ್ಕೃತವು ಸಾಮರಸ್ಯಕ್ಕಾಗಿ ಅವಶ್ಯಕ ಎಂದು ಸಂಸ್ಕೃತ ಭಾರತಿಯ ಕರ್ನಾಟಕ ಉಸ್ತುವಾರಿ ಶ್ರೀ ದತ್ತಾತ್ರೇಯ ವಜ್ರಳ್ಳಿ ಹೇಳಿದರು. ಅವರು ಅಕ್ಟೋಬರ್ 22 ರಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಶದಿನಾತ್ಮಕ ಸಂಸ್ಕೃತ ಸಂಭಾಷಣ ಶಿಬಿರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಶಿಬಿರಾರ್ಥಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅನುಭವ ಕಥನ, ನೃತ್ಯ ಪ್ರಹಸನ ಇತ್ಯಾದಿಗಳನ್ನು ಸಂಸ್ಕೃತದಲ್ಲಿಯೇ ನಡೆಸಿಕೊಟ್ಟರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ಮುರಳೀಧರ ಕೆ. ಮತ್ತು ಮುಖ್ಯೋಪಾಧ್ಯಾಯ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಮಮತಾ, ಶ್ರೀಮತಿ ಸಂಧ್ಯಾ.ಕೆ ಉಪಸ್ಥಿತರಿದ್ದರು.
10 ದಿನಗಳ ಶಿಬಿರವನ್ನು ಸಂಸ್ಕೃತ ಭಾರತಿ-ಅಕ್ಷರಂನ ಕಾರ್ಯಕರ್ತೆ ಕು| ಸೌದಾಮನೀ ನಡೆಸಿಕೊಟ್ಟರು. ಕು.ಕೃತಿ ಸ್ವಾಗತಿಸಿ, ಕು. ಕ್ಷಿತಿ ಕಶ್ಯಪ್ ವಂದಿಸಿದರು. ಆದಿತ್ಯ ನಾರಾಯಣ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕೃತ ಶಿಕ್ಷಕರಾದ ಶ್ರೀಮತಿ ಮಧುರಾ ಜೋಶಿ, ಶ್ರೀಮತಿ ಸೌಮ್ಯಲತ, ಶ್ರೀ ವೆಂಕಟೇಶ್ ಪ್ರಸಾದ್ ಸಹಕರಿಸಿದರು.