ಮೂಡುಬಿದ್ರಿಯಲ್ಲಿ ನವಂಬರ್ 15 ರಿಂದ 18 ರವರೆಗೆ ನಡೆದ ಆಳ್ವಾಸ್ ನುಡಿಸಿರಿ-ವಿಜ್ಞಾನಸಿರಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 9ನೇ ತರಗತಿಯ ಆದ್ಯ ಸುಲೋಚನ ಮುಳಿಯ ಮತ್ತು ಸುಮೇದ್ ನಾವುಡ ತಂಡ ‘The integrated Railway Intact System’ ಪ್ರಾಜೆಕ್ಟ್‌ಗೆ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. 9ನೇ ತರಗತಿಯ ಶರುಣ್ ಶಶಿಧರ್ ಮತ್ತು ಹರ್ಷಿತ್ ತಂಡ Plastink from waste plastics ಪ್ರಾಜೆಕ್ಟ್‌ನ್ನು, ವಿಜಿತ್ ಮತ್ತು ಶರತ್ ತಂಡ Easy way to control Vehicle Traffic ಪ್ರಾಜೆಕ್ಟ್‌ನ್ನು, 8ನೇ ತರಗತಿಯ ಯುವರಾಜ್ ಮತ್ತು ಆಶ್ರಯ ತಂಡ Ravishing light an innovative conception of displaying images ಪ್ರಾಜೆಕ್ಟ್‌ನ್ನು ಪ್ರದರ್ಶಿಸಿದ್ದು, ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ಇವರಿಗೆ ವಿಜ್ಞಾನ ವಿಭಾಗದ ಶಾರದ ಶೆಟ್ಟಿ ಮತ್ತು ರಾಜಶೇಖರ್‌ಬಿ.ಸಿ.ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.