QR Code Business Card

ಮಕ್ಕಳ ರಾಷ್ಡ್ರೀಯ ವಿಜ್ಞಾನ ಸಮಾವೇಶ : ಶಾಲೆಯ ಎರಡು ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ದಿನಾಂಕ 30-11-2018 ರಂದು 26 ನೇ ದ.ಕ ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C.)-’ಜಿಲ್ಲಾಮಟ್ಟದ ವಿಜ್ಞಾನ ಪ್ರಬಂಧ ಮಂಡನೆ’ ಸ್ಪರ್ಧೆಯು ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಕರಣ್ ಎಮ್. ಭಟ್ ಮತ್ತು ಅತಿಶಯ್ ಜೈನ್, ಚಿನ್ಮಯಕೃಷ್ಣವರ್ಮ ಮತ್ತು ತಮನ್, ವರ್ಷ ಮತ್ತು ಸಂಸ್ಕೃತಿ ಜೂನಿಯರ್ ವಿಭಾಗ ಹಾಗೂ ಕನ್ಯಾ ಶೆಟ್ಟಿ ಮತ್ತು ತಶ್ವಿ ರೈ- ಸೀನಿಯರ್ ವಿಭಾಗ ಹೀಗೆ 4 ತಂಡಗಳು ಭಾಗವಹಿಸಿರುತ್ತಾರೆ.

ಸೂರ್‍ಯ- ಮಲ್ಟಿಪರ್ಪಸ್ ಜೀರೋ ವೇಸ್ಟೇಜ್ ಶೀರ್ಷಿಕೆಯಡಿ ಕರಣ್ ಎಮ್ ಭಟ್ ಮತ್ತು ಅತಿಶಯ ಜೈನ್ ಪ್ರಥಮ ಸ್ಥಾನ ಹಾಗೂ ಸೈಂಟಿಫಿಕ್ ಸ್ಟಡಿ ಆಫ್ ಎಫಿಕಸಿ ಆಫ್ ಆರೆಂಜ್ ಪೀಲ್ ಎಗೈಸ್ಟ್ ಹೌಸ್‌ಹೋಲ್ಡ್ ಪೆಸ್ಟ್ ಶೀರ್ಷಿಕೆಯಡಿ ಚಿನ್ಮಯಕೃಷ್ಣವರ್ಮ ಮತ್ತು ತಮನ್, ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಜೂನಿಯರ್ ವಿಭಾಗದ ಮಾರ್ಗದರ್ಶಕರಾಗಿ ಶ್ರೀಮತಿ ಸಿಂಧು, ಶ್ರೀಮತಿ ರೇಖಾ, ಶ್ರೀಮತಿ ದೀಪ್ತಿ ಆರ್ ಭಟ್, ಕು. ಪ್ರಿಯಾಂಕ ಹಾಗೂ ಸೀನಿಯರ್ ವಿಭಾಗದ ಮಾರ್ಗದರ್ಶಕರಾಗಿ ಶ್ರೀಮತಿ ಶಾರದಾ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ. ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ.