ವಿವೇಕಾನಂದ ಆಂಗ್ಲ ಮಾಧ್ಯಮ ತೆಂಕಿಲ ಪುತ್ತೂರು ಶಾಲೆಯ ವಿವೇಕಾನಂದ ಸ್ಕೌಟ್ಸ್ ಮತ್ತು ಕಬ್ ದಳ ಹಾಗೂ ನಿವೇದಿತಾ ಗೈಡ್ಸ್ ಕಂಪೆನಿಗಳು ವಿಶ್ವ ಪರಿಸರ ದಿನಾಚರಣೆಯನ್ನು ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 21-6-2019 ನೇ ಶುಕ್ರವಾರ ವ್ಯವಸ್ಥಿತ ರೀತಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾರವರು ಗಿಡನೆಟ್ಟು, ’ಪರಿಸರ ಸಂರಕ್ಷಣೆಯ ಹೊಣೆಯನ್ನು ತಾವೆಲ್ಲರೂ ಹೊತ್ತು ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯವಾಗಿಸಬೇಕೆಂದು’ ಹೇಳುವುದರ ಮೂಲಕ ಅವರ ಕರ್ತವ್ಯಗಳನ್ನು ಅವರಿಗೆ ನೆನಪಿಸಿ ಹುರಿದುಂಬಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಯೋಗದಲ್ಲಿ ಸ್ವರ್ಣಪದಕ ವಿಜೇತೆ ಹಾಗೂ ಸ್ಕೌಟ್ ಮಾಸ್ಟರ್ ಆದ ಶ್ರೀಮತಿ ನಮಿತಾರವರು, ’ನಿರಂತರ ಯೋಗಾಭ್ಯಾಸದಿಂದ ನಾವೆಲ್ಲರೂ ಆರೋಗ್ಯವನ್ನು ಹೇಗೆ ಕಾಪಾಡಬಹುದೆಂದು ಮನದಟ್ಟುಪಡಿಸಿದರು’. ಮಕ್ಕಳು ಅವರ ಮಾರ್ಗದರ್ಶನದಲ್ಲಿ ಯೋಗದಲ್ಲಿ ತೊಡಗಿದರು.
ಈ ಅರ್ಥಪೂರ್ಣ ಹಾಗೂ ವ್ಯವಸ್ಥಿತ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಶಿಕ್ಷಕರಾದ ಶ್ರೀ ಮಹೇಶ್, ಗೈಡ್ಸ್ ಶಿಕ್ಷಕಿಯರಾದ ಶ್ರೀಮತಿ ಅನುರಾಧ ಹಾಗೂ ಕುಮಾರಿ ದೇವಿಶ್ರೀ ಹಾಗೂ ಕಬ್ಸ್ ಶಿಕ್ಷಕಿಯರಾದ ಶ್ರೀಮತಿ ಪುಷ್ಪಲತಾ ಹಾಗೂ ಕುಮಾರಿ ರಮ್ಯರವರು ಸಹಕರಿಸಿದರು. ಶಾಲೆಯ ಸೌಟ್ಸ್ , ಗೈಡ್ಸ್ , ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವು ಶಾಲಾ ಮುಖ್ಯಗುರುಗಳಾದ ಶ್ರೀಯುತ ಸತೀಶಕುಮಾರ ರೈಯವರ ಮಾರ್ಗದರ್ಶನದಲ್ಲಿ ಮತ್ತು ಸಹಶಿಕ್ಷಕರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು.