ದಿನಾಂಕ 19-7-2019 ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಸಭಾಂಗಣದಲ್ಲಿ ರೋಟರಿ ಕ್ಲಬ್, ಪುತ್ತೂರು ಪೂರ್ವದ ಸಹಯೋಗದೊಂದಿಗೆ ಇಂಟರ್ಯಾಕ್ಟ್ ಕ್ಲಬ್ನ್ನು ಉದ್ಘಾಟಿಸಲಾಯಿತು. ಇಂಟರ್ಯಾಕ್ಟ್ ಕ್ಲಬ್ ರೋಟರಿ ಕ್ಲಬ್ನ ಅಂಗಸಂಸ್ಥೆಯಾಗಿದ್ದು ಇದರ ಮೂಲ ಉದ್ದೇಶ ಮಕ್ಕಳಲ್ಲಿರುವ ವ್ಯಕ್ತಿತ್ವವನ್ನು ಮತ್ತೆ ಜಾಗೃತಿಗೊಳಿಸುವುದಾಗಿದೆ. ಮಕ್ಕಳಲ್ಲಿರುವ ಸಭಾ ಕಂಪನ, ಭಾಷಣಕಲೆ, ಸಹಾಯ ಮನೋಭಾವಗಳನ್ನು ಬೆಳೆಸುವುದು ಇಂಟರ್ಯಾಕ್ಟ್ನ ಮೂಲ ಉದ್ಧೇಶವಾಗಿದೆ ಎಂದು ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ್ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ನುಡಿದರು.
ಅತಿಥಿಯಾಗಿ ಮಾತನಾಡಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ಸಂಧ್ಯಾರವರು ಮಾತನಾಡಿ ಇಂಟರ್ಯಾಕ್ಟ್ ಕ್ಲಬ್ ಮೂಲಕ ಮಕ್ಕಳು ತಮ್ಮ ವ್ಯಕ್ತಿ ವಿಕಸನವನ್ನು ಮಾಡಿದಾಗ ಪರಿಪೂರ್ಣ ವಿದ್ಯಾರ್ಥಿಗಳಾಗಲು ಸಾಧ್ಯ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಇಂಟರ್ಯಾಕ್ಟ್ ಕ್ಲಬ್ ದಾರಿದೀಪವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷೆಯಾಗಿ ಇಶಾ ಸುಲೋಚನ, ಕಾರ್ಯದರ್ಶಿಯಾಗಿ ಅದಿತಿಶಂಕರಿ, ಉಪಾಧ್ಯಕ್ಷರಾಗಿ ಕೀರ್ತನ್, ಸಾರ್ಜಂಟ್ ಆಮ್ಸ್ ಆಗಿ ಕೃತಿ.ಕೆ ಹಾಗೂ ವಿವಿಧ ಕ್ಲಬ್ ನಿರ್ದೇಶಕರಾಗಿ ವಿಂಧ್ಯಾ ಕಾರಂತ , ಪ್ರತೀಕ್ಷಾ, ವನೀಷ ಜಾಲಾಡಿ, ಲಕ್ಷೀತ್, ಸ್ನೇಹಿಲ್.ಎಸ್.ನಾಯ್ಕ ರವರಿಗೆ ನೂತನ ಪದಪ್ರದಾನ ವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ನೇಹ ಮತ್ತು ಬಳಗ ಪ್ರಾರ್ಥಿಸಿ, ರೋಟರಿಕ್ಲಬ್ನ ಮಾಜಿ ಅಧ್ಯಕ್ಷರಾದ ವಸಂತ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿ, ಇಂಟರ್ಯಾಕ್ಟ್ ಕ್ಲಬ್ ಶಿಕ್ಷಕ ನಿರ್ದೇಶಕರಾದ ಗಣೇಶ್ ಏತಡ್ಕ ರವರು ಸ್ವಾಗತಿಸಿ, ವಿದ್ಯಾರ್ಥಿಗಳಾದ ಲಕ್ಷೀತ್, ಸ್ನೇಹಿಲ್, ದೈವಿಕ್ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.