ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ವತಿಯಿಂದ ಮಾಯಿದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇಲ್ಲಿ ದಿನಾಂಕ 2019-20 ರ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯು ಸೆಪ್ಟೆಂಬರ್ 9ರಂದು ಜರುಗಿತ್ತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತನ್ವಿ ಶೆಣೈ ಇಂಗ್ಲೀಷ್ ಕಂಠಪಾಠ, ಮಹಿಮಾ ಸಿ ಕರಂಡೆ ಮರಾಠಿ ಕಂಠಪಾಠ, ಧನ್ವಿತಾ ಕೆ.ಎಸ್. ತೆಲುಗು ಕಂಠಪಾಠ, ತೇಜ ಚಿನ್ಮಯ ಹೊಳ್ಳ ಲಘು ಸಂಗೀತ, ಅಮೋಘ ಕೃಷ್ಣ ಭಕ್ತಿಗೀತೆ, ಅನ್ನಪೂರ್ಣ ಮತ್ತು ತಂಡದೇಶ ಭಕ್ತಿಗೀತೆ, ಧನುಷ್‌ರಾಮ್ ಮತ್ತು ತಂಡ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ. ಅಂತೆಯೇ ಮಧುಮಿತ ಎಸ್. ತಮಿಳು ಕಂಠಪಾಠ, ಶ್ರೀಶಕೃಷ್ಣ ಕ್ಲೇ ಮಾಡೆಲಿಂಗ್, ಪೂರ್ವಿ ರೈ ಯಕ್ಷಗಾನ, ಮಾನ್ಯ ಚಿತ್ರಕಲೆ, ನಂದನ ಮತ್ತು ತಂಡ ಕವ್ವಾಲಿ ಇದರಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಧನ್ವಿ ಆರ್. ಬಿ. ಕನ್ನಡ ಕಂಠಪಾಠ, ಧಾತ್ರಿ ಸಿ.ಎಚ್. ಧಾರ್ಮಿಕ ಪಠಣ ಸಂಸ್ಕೃತ, ವೇದ್‌ವೃತ್ ಭಂಡಾರಿ ಮತ್ತು ತಂಡ ಜನಪದ ನೃತ್ಯಗಳಲ್ಲಿ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ರೈಯವರು ತಿಳಿಸಿದ್ದಾರೆ.