QR Code Business Card

ಪ್ರತಿಭಾಕಾರಂಜಿ-ಕಿರಿಯ

ಸಾರ್ವಜನಿಕ ಶಿಕ್ಷಣ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ವತಿಯಿಂದ ಮಾಯಿದೆ ದೇವುಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರು ಇಲ್ಲಿ 2019-20 ರ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯು ಸೆಪ್ಟಂಬರ್ 9 ರಂದು ಜರುಗಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮಿಹಿರ್ ಭಟ್‌ – ಇಂಗ್ಲೀಷ್‌ ಕಂಠ ಪಾಠ, ಕೌಶಿಕ್ ಬಿ. – ಮರಾಠಿ ಕಂಠ ಪಾಠ, ಅಸ್ನಾ-ಉರ್ದುಕಂಠ ಪಾಠ, ದೀಕ್ಷಾ ಬಿ.- ತಮಿಳು ಕಂಠ ಪಾಠ, ಸಾನ್ವಿ ಎಸ್.- ಅಶು ಭಾಷಣ, ಸುಪ್ರಜರಾವ್- ಲಘು ಸಂಗೀತ, ನಿಲೀಷ್ಕ-ಚಿತ್ರಕಲೆ, ಅಧ್ವೈತ್‌ ಕಜೆ-ಭಕ್ತಿಗೀತೆ ಮತ್ತು ಅನನ್ಯ ಆಚಾರ್ಯ ತಂಡ ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿರುತ್ತಾರೆ. ನಾಗಭೂಷಣ ಕಿಣಿ- ಸಂಸ್ಕೃತ ಕಂಠಪಾಠ, ಚಾರುಲಿಶಾ ಮತ್ತು ತಂಡ ಕವ್ವಾಲಿ, ಅಮೃತ ರಶ್ಮಿ ಯಕ್ಷಗಾನ ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ವಿಶೃತಿ ಶೆಟ್ಟಿ-ತಮಿಳು ಕಂಠಪಾಠ, ಚಿಂತನ್ ಪಿ-ಕ್ಲೆ ಮೊಡೆಲಿಂಗ್, ಆಪ್ತ ಚಂದ್ರಮತಿ ಮುಳಿಯ ತಂಡ ಕೋಲಾಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಸತೀಶ್‌ಕುಮಾರ್‌ ರೈ ಅವರು ತಿಳಿಸಿರುತ್ತಾರೆ.