ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜೇತ ವಿದ್ಯಾರ್ಥಿಗಳ ವಿವರ :- ಜನದಗೀತೆಯಲ್ಲಿ ಅಂಜನಾ (ಪ್ರಥಮ), ಭಾವಗೀತೆಯಲ್ಲಿ ಮೇಧಾ ಅಡಿಗ (ಪ್ರಥಮ), ಮರಾಠಿ ಭಾಷಣದಲ್ಲಿ ಸಾಕ್ಷಿ (ಪ್ರಥಮ), ವೈಯಕ್ತಿಕ ಯಕ್ಷಗಾನದಲ್ಲಿ ಪ್ರದೀಪಕೃಷ್ಣ (ಪ್ರಥಮ), ಇಂಗ್ಲಿಷ್ ಭಾಷಣದಲ್ಲಿ ಕನ್ಯಾ ಶೆಟ್ಟಿ (ದ್ವಿತೀಯ), ತುಳು ಭಾಷಣದಲ್ಲಿ ಶರುಣ್ ಶಶಿಧರ್ (ದ್ವಿತೀಯ), ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಶ್ರೀಲಕ್ಷ್ಮಿ (ದ್ವಿತೀಯ), ಆಶುಭಾಷಣದಲ್ಲಿ ಕವನ (ದ್ವಿತೀಯ), ಹಿಂದಿ ಭಾಷಣದಲ್ಲಿ ಪ್ರಿಯಾ (ತೃತೀಯ), ಕೊಂಕಣಿ ಭಾಷಣದಲ್ಲಿ ವರ್ಷಾ ನಾಯಕ್ (ತೃತೀಯ), ಭರತನಾಟ್ಯದಲ್ಲಿ ಶುಭಶ್ರೀ (ತೃತೀಯ) ಸ್ಥಾನ ಗಳಿಸಿರುತ್ತಾರೆ.
ಕಲೋತ್ಸವ ವಿಭಾಗದ ಯಕ್ಷಗಾನದಲ್ಲಿ ಪ್ರದೀಪ್ ಕೃಷ್ಣ, ಆದಿತ್ಯ , ಖುಷಿ ರೈ, ಪ್ರಾರ್ಥನ್ ರೈ, ಕೃತಿ.ಕೆ, ಪ್ರಗತಿ, ಶಾರಿಕಾ ರಾಜ್, ಸರ್ವಾಣಿ , ಶ್ರೀಮಾನ್ ಘಾಟೆ, ಹಿತೇಶ್, ವಿಕಾಸ್ ಇವರ ತಂಡ (ಪ್ರಥಮ) , ಸಂಗೀತದಲ್ಲಿ ಹಂಶಿಕಾ,ಶ್ರೀಲಕ್ಷ್ಮಿ, ಮೇಧಾ ಅಡಿಗ, ಅನ್ವಿತಾ, ಮಹಿಮಾ, ಪೂಜಿತ್, ಹರ್ಷಿತ್, ಶಿವನ್ ರಾಜ್ ಇವರ ತಂಡ (ದ್ವಿತೀಯ), ದೃಶ್ಯಕಲೆಯಲ್ಲಿ ಖುಷಿ ಪುತ್ತೂರಾಯ , ಮನ್ನಿತ್, ಲಕ್ಷ್ಮಿ ಅರ್ಪಣ್ , ತಮನ್ ಇವರ ತಂಡ (ತೃತೀಯ), ನಾಟಕದಲ್ಲಿ ಭೂಮಿಶ್ರೀ, ಅನುಷಾ, ಶ್ರಾವ್ಯ, ಪ್ರತೀಕ್ಷಾ, ಶ್ರೇಯಾ, ಋದ್ಧಿ, ವಿಭಾ, ವಿಂಧ್ಯಾ ಕಾರಂತ್, ಲಹರಿ, ವಿನೋದಿನಿ ಇವರ ತಂಡ (ತೃತೀಯ) ಸ್ಥಾನ ಗಳಿಸಿರುತ್ತಾರೆ.
ಇವರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರು ಆಗಸ್ಟ್ 18 ರಂದು ನಡೆಯುವ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.