Science Society of India ನಡೆಸುವ INSEF ವಿಜ್ಞಾನ ಮೇಳಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4 ಪ್ರಾಜೆಕ್ಟ್ಗಳು ಆಯ್ಕೆಗೊಂಡಿದ್ದು, ಮೂಡುಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿನಾಂಕ 14-09-2019 ರಂದು ರಾಜ್ಯಮಟ್ಟದ ಸ್ಪರ್ಧೆ ನಡೆಯಿತು. ಇದರಲ್ಲಿ 3 ಪ್ರಾಜೆಕ್ಟ್ಗಳು ಪ್ರಶಸ್ತಿ ಪಡೆದಿದ್ದು, ಅನ್ವಿತ್ ಎನ್. 7 ನೇ ತರಗತಿ ತಯಾರಿಸಿದ A Novel Product By Saloon Waste (Hair) To Increase Soil Fertility -KeshaSatva ಸಂಶೋಧನಾತ್ಮಕ ಪ್ರಾಜೆಕ್ಟ್ಗೆ ದ್ವಿತೀಯ ಪ್ರಶಸ್ತಿ, ವರ್ಷಾ ಕೆ. 9ನೇ ತರಗತಿ ತಯಾರಿಸಿದ MagInk – Innovative project to save paper ಸಂಶೋಧನಾತ್ಮಕ ಪ್ರಾಜೆಕ್ಟ್ಗೆ ದ್ವಿತೀಯ ಪ್ರಶಸ್ತಿ, ಆಶ್ರಯ ಪಿ. ಮತ್ತು ನೇಹಾ ಭಟ್ ತಂಡ ಇವರ Nutrient value of Colocasiaesculenta in unhygienic water ಸಂಶೋಧನಾತ್ಮಕ ಪ್ರಾಜೆಕ್ಟ್ಗೆ ತೃತೀಯ ಪ್ರಶಸ್ತಿ, ವಸುಧಾ ಭಟ್ 7 ನೇ ತರಗತಿ ಇವರ ಪ್ರಾಜೆಕ್ಟ್ ಪ್ರೋತ್ಸಾಹಕ ಬಹುಮಾನಗಳಿಸಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.