QR Code Business Card

ವಿಜ್ಞಾನ ಮೇಳದಲ್ಲಿ ವಿವಿಧ ಪ್ರಶಸ್ತಿ – ರಾಜ್ಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ಘಟಕ ನಡೆಸುವ ವಿದ್ಯಾಭಾರತಿ ಕರ್ನಾಟಕದ ಸಹಯೊಗದೊಂದಿಗೆ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸೆಪ್ಟಂಬರ್ 7 ರಂದು ನಡೆದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು,

ಶಿಶು ವರ್ಗ ವಿಭಾಗ- ವಿಜ್ಞಾನ ಪ್ರದರ್ಶನದಲ್ಲಿ ಮಿಹಿರ್ ಭಟ್ 4 ನೇ ತರಗತಿ ದ್ವಿತೀಯ, ಪ್ರಜ್ವಲ್ ವಿ.ಬಿ. ತೃತೀಯ, ವಿಜ್ಞಾನ ಸಂಶೋಧನಾತ್ಮಕ ವಿಷಯದಲ್ಲಿ ಸಾರ್ಥಕ್ ಕೆ. ಸಿ. ಪ್ರಥಮ, ವೈದಿಕ ಗಣಿತ ರಸಪ್ರಶ್ನೆಯಲ್ಲಿ ಪ್ರಥ್ಯೂಷ್, ವೈಶಾಕ್, ಪ್ರಮತೇಶ್‌ ತೃತೀಯ, ಗಣಿತ ಪ್ರದರ್ಶನದಲ್ಲಿ ಚಿನ್ಮಯಿ ಎಲ್. ಪ್ರಥಮ, ಗಣಿತ ಸಂಶೋಧನಾತ್ಮಕ ವಿಷಯದಲ್ಲಿ ವೇದ್ ವಿ. 5ನೇ ತರಗತಿ ದ್ವಿತೀಯ, ಸಂಸ್ಕೃತಿ ಜ್ಞಾನ ಕಥೆಯಲ್ಲಿ ಸಮನ್ವಿತಾ ಭಟ್ 5ನೇ ತರಗತಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಬಾಲವರ್ಗದ ವಿಭಾಗ- ವಿಜ್ಞಾನ ಪ್ರದರ್ಶನದಲ್ಲಿ ಕರಣ್ ಮತ್ತು ಅತಿಶಯ್ 8ನೇ ತರಗತಿ ಪ್ರಥಮ, ವಿಜ್ಞಾನ ಪತ್ರವಾಚನದಲ್ಲಿ ಚಿನ್ಮಯ್ ಕೃಷ್ಣ ದ್ವಿತೀಯ, ವಿಜ್ಞಾನ ರಸಪ್ರಶ್ನೆಯಲ್ಲಿ ಧನುಷ್‌ರಾಮ್, ಹೇಮಂತ್, ಅಭಿರಾಮ 7ನೇ ತರಗತಿ ದ್ವಿತೀಯ, ವಿಜ್ಞಾನ ಪ್ರಯೋಗದಲ್ಲಿ ಪ್ರಮಥ್‌ ರೈ 8ನೇ ತರಗತಿ ಪ್ರಥಮ, ವೈದಿಕ ಗಣಿತ ರಸಪ್ರಶ್ನೆಯಲ್ಲಿ ಆತ್ಮೀಯ ಕಶ್ಯಪ್, ಅಭಯ್ ಶರ್ಮ, ಅಂಕಿತ 8ನೇ ತರಗತಿ ತೃತೀಯ, ಗಣಿತ ಪ್ರಯೋಗದಲ್ಲಿ ಅನ್ವಿತ್‌ ಎನ್ 7ನೇ ತರಗತಿ ದ್ವಿತೀಯ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ವರ್ಷಾ, ದೀಪ್ತಿ, ನವನೀತ್ ಶಾಸ್ತ್ರೀ ತೃತೀಯ ಸ್ಥಾನ ಗಳಿಸಿರುತ್ತಾರೆ.

ಕಿಶೋರವರ್ಗದ ವಿಭಾಗದ ವಿಜ್ಞಾನ ಪ್ರದರ್ಶನದಲ್ಲಿ ಶರುಣ್ ಶಶಿಧರ್ 10 ನೇ ತರಗತಿ ದ್ವಿತೀಯ, ವಿಜ್ಞಾನ ಸಂಶೋಧನಾತ್ಮಕ ವಿಷಯದಲ್ಲಿ ಆದ್ಯ ಸುಲೊಚನ 9ನೇ ತರಗತಿ ಪ್ರಥಮ, ವಿಜ್ಞಾನ ಪತ್ರವಾಚನದಲ್ಲಿ ಯಶಸ್ವಿ ಶೆಟ್ಟಿ ಪ್ರಥಮ, ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರತೀಕ್ 9 ನೇ ತರಗತಿ, ಸ್ಕಂದ ಗಣೇಶ್, ಸುಶ್ರುತ್ ವಶಿಷ್ಠ 10ನೇ ತರಗತಿ ತೃತೀಯ, ವೈದಿಕ ಗಣಿತ ರಸಪ್ರಶ್ನೆಯಲ್ಲಿ ಅವ್ಯಯ ಶರ್ಮ, ಕೃತಿ, ದೈವಿಕ್‌ ರಾಜೇಶ್ 9ನೇ ತರಗತಿ ಪ್ರಥಮ, ಗಣಿತ ಸಂಶೋಧನಾತ್ಮಕ ವಿಷಯದಲ್ಲಿ ಪ್ರತೀಕ್ಷಾ 9ನೇ ತರಗತಿ ದ್ವಿತೀಯ, ವೈದಿಕ ಗಣಿತ ಪತ್ರವಾಚನದಲ್ಲಿ ಆಶ್ರಯ 9ನೇ ತರಗತಿ ಪ್ರಥಮಸ್ಥಾನ ಗಳಿಸಿರುತ್ತಾರೆ.

ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಇದೇ ತಿಂಗಳ ಸೆಪ್ಟೆಂಬರ್ 28, 29, 30 ರಂದು ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.