ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ 32ನೆಯ ರಾಷ್ಟ್ರೀಯ ಚದುರಂಗ ಸ್ಪರ್ಧೆಯು ಹರಿಯಾಣ ರಾಜ್ಯದ ಕುರುಕ್ಷೇತ್ರದ ಶ್ರೀಮದ್ಭಗವದ್ಗೀತಾ ಶಾಲೆಯಲ್ಲಿ ನಡೆಯಿತು.
ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಬಾಲವರ್ಗದ ತಂಡವು ಪ್ರಥಮ ಸ್ಥಾನವನ್ನು ಪಡೆಯಿತು.
ತಂಡದಲ್ಲಿ – ಮನ್ವಿತ್ ಕನಜಾಲ್ ( ದಾಮೋದರ್ ಕೆ ಮತ್ತು ರಶ್ಮಿ ವಿ.ಎಸ್ ಇವರ ಪುತ್ರ) ಧನುಷ್ ರಾಮ್ ಎಂ( ದಿನೇಶ್ ಪ್ರಸನ್ನ ಮತ್ತು ಉಮಾ ಡಿ ಪ್ರಸನ್ನ ಇವರ ಪುತ್ರ ), ಪ್ರಣಿಲ್ ರೈ ಎಂ( ಪ್ರಕಾಶ್ ರೈ.ಎಂ ಹಾಗೂ ಸತ್ಯಲತಾ ಇವರ ಪುತ್ರ) ಶಿವ ಚೇತನ್ (ಸೂರ್ಯ ಶಂಕರ್ ಭಟ್ ಹಾಗೂ ಮಾಲತಿ ಭಟ್ ಇವರ ಪುತ್ರ) ಪಂಕಜ್ ಭಟ್ (ಮಹಾಲಿಂಗೇಶ್ವರ ಪ್ರಸಾದ್ ಹಾಗೂ ಪಾವನಾ ಪ್ರಸಾದ್ ಇವರ ಪುತ್ರ).
ಇವರು ಮುಂದೆ ನಡೆಯಲಿರುವ ಮಹಾರಾಷ್ಟ್ರ ರಾಜ್ಯದ ಸಿಲ್ವಸ್ ಮತ್ತು ನಗರ್ ಹವೇಲಿ 65ನೇ ರಾಷ್ಟ್ರೀಯ ಮಟ್ಟದ (SGFI) ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಮುಖ್ಯಗುರುಗಳಾದ ಸತೀಶ್ ಕುಮಾರ್ ರೈ ಇವರು ತಿಳಿಸಿರುತ್ತಾರೆ.