ದಿನಾಂಕ 2-10-2019 ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯು ಸಭಾಂಗಣದಲ್ಲಿ ಗಾಂಧಿ ಜಯಂತಿ ಆಚರಣೆಯನ್ನು ಮಾಡಲಾಯಿತು. ಗಾಂಧೀಜಿಯವರ ಆದರ್ಶ ಜೀವನದ ಕುರಿತು ಮಾತನಾಡಿದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಕೆ.ಜಿ ವಿಭಾಗದ ಶಿಕ್ಷಕಿ ಶ್ರೀಮತಿ ಪದ್ಮಲಕ್ಷ್ಮೀಯವರು ಮಾತನಾಡಿ ಗಾಂಧೀಜಿಯವರು ಭಗವದ್ಗೀತೆ ತತ್ವದಂತೆ ತಮ್ಮ ಜೀವನವನ್ನು ನಡೆಸಿದವರು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದಂತೆ ಕರ್ತವ್ಯವೇ ದೇವರು ಎಂದು ಬದುಕಿದವರು, ಗಾಂಧೀಜಿಯವರು ತಮ್ಮ ಜೀವನದಲ್ಲಿ ಸತ್ಯ ಅಂಹಿಂಸೆ, ಸರಳತೆ, ತ್ಯಾಗ, ಬದ್ಧತೆ, ಪ್ರಾರ್ಥನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ಗಾಂಧೀಜಿಯವರು ತಮ್ಮ ಶೌಚಾಲಯಗಳನ್ನು ತಾವೇ ಸ್ವಚ್ಚ ಮಾಡುವುದರ ಮೂಲಕ ಸ್ವಚ್ಚತೆಗೆ ಪ್ರಮುಖ ಆದ್ಯತೆಗಳನ್ನು ನೀಡುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿ ವಿದ್ಯಾರ್ಥಿನಿಯರಾದ ಕು. ಶ್ರೀಲಕ್ಷ್ಮೀ ಮತ್ತು ಬಳಗದವರು ರಘುಪತಿ ರಾಘವ ರಾಜಾ ರಾಮ್ ಹಾಡನ್ನು ಹಾಡಿದರು.