ದಿನಾಂಕ 1-11-2019 ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗಿನ ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ‘ನನ್ನ ಕಲ್ಪನೆಯ ಸ್ವಚ್ಚ ಭಾರತ’ವೆಂಬ ವಿನೂತನ ಕಲ್ಪನೆಯ ಚಿತ್ರ ಬಿಡಿಸುವ ಕಾರ್ಯಕ್ರಮ ನಡೆಯಿತು.
ಈ ವರ್ಷ ನಾವು ಗಾಂಧೀಜಿಯವರ 150 ನೇ ಜನ್ಮದಿನೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ ಸ್ವಚ್ಚಭಾರತದ ಕನಸನ್ನು ನಮ್ಮದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ವಿವಿಧ ಯೋಜನೆಗಳ ಮೂಲಕ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸ್ವಚ್ಚ ಭಾರತದ ಬಗ್ಗೆ ಪುಟಾಣಿ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಕಲ್ಪನೆಗಳು ಇರಬಹುದು ಎಂಬ ಕುತೂಹಲದೊಂದಿಗೆ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೆಂದರೆ ಅದು ಚಿತ್ರಕಲೆ. ಆ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮಧುರಾ ಜೋಶಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶಿಕ್ಷಕಿ ಶ್ರೀಮತಿ ವೀಣಾ ಜೋಶಿಯವರು ಬಿಳಿ ಹಾಳೆಗೆ ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕರಾದ ಮಹೇಶ್ ಹಿರೆಮಣಿ, ಚೇತನ್‌ಕುಮಾರ್. ವಿಟ್ಲ, ಶಿವಕುಮಾರ್ ಎ.ಎ ಹಾಗೂ ಕಾರ್ತಿಕ್ ಕುಮಾರ್ ಸಹಕರಿಸಿದರು. ಶಿಕ್ಷಕಿ ಶ್ರೀಮತಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.