QR Code Business Card

ಏಟಿಎಲ್ ಮ್ಯಾರಥನ್ ನಲ್ಲಿ ಆದ್ಯ ಸುಲೋಚನ ತಯಾರಿಸಿದ ಯೋಜನೆ ಆಯ್ಕೆ

ಭಾರತ ಸರಕಾರದ ವತಿಯಿಂದ ವಿದ್ಯಾರ್ಥಿಗಳ ಸೃಜನಾತ್ಮಕ ಯೋಚನೆಗಳನ್ನು ಬೆಳಕಿಗೆ ತರುವ ದೃಷ್ಟಿಯಿಂದ ನೀತಿ ಆಯೋಗವು ಅಟಲ್ ಇನ್ನೋವೇಶನ್ ಮಿಷಿನ್ ವತಿಯಿಂದ ನಡೆಸಲ್ಪಡುವ ರಾಷ್ಟ್ರಮಟ್ಟದ ಏಟಿಎಲ್ ಮ್ಯಾರಥನ್­ನಲ್ಲಿ ಭಾಗವಹಿಸಿದ ಫಲಿತಾಂಶ ಬಿಡುಗಡೆಯಾಗಿದ್ದು ಪ್ರತಿ ಜಿಲ್ಲೆಯಿಂದ 2 ಉತ್ತಮ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ವಿದ್ಯಾರ್ಥಿನಿ ಆದ್ಯ ಸುಲೋಚನ ಮುಳಿಯ ಇವರು ತಯಾರಿಸಿದ Integrated Railway Intact System ಎಂಬ ಯೋಜನೆಯು ಆಯ್ಕೆಯಾಗಿರುತ್ತದೆ ಆಂಗ್ಲ ಮಾಧ್ಯಮ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್­ನ ಸಂಯೋಜಕರಾದ ಶ್ರೀ ಶಿವಪ್ರಸಾದ್ ಅವರು ಮಾರ್ಗದರ್ಶನ ನೀಡಿರುತ್ತಾರೆ. ಹೆಚ್ಚಿನ Railway ಅಪಘಾತಗಳು ರೈಲು ಹಳಿ ತಪ್ಪುವುದರಿಂದ ಆಗುತ್ತದೆ. ಈ ಮಾದರಿಯು ನಮ್ಮ ದೇಶದಲ್ಲಿ ಸಂಭವಿಸುವ ಹಲವಾರು ರೈಲು ಅಪಘಾತಗಳನ್ನು ತಡೆಯಲು ರೂಪಿಸಿದಂತಹ ಯೋಜನೆಯಾಗಿರುತ್ತದೆ.

ಹಾಗೆಯೇ ತಮ್ಮಗೆಲ್ಲರಿಗೂ ತಿಳಿದಿರುವಂತೆ ಹಲವು ಯಶಸ್ವಿ ಕೃಷಿ ಮೇಳಗಳನ್ನು ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಹಾಗೂ ಇದರ ಅಂಗಸಂಸ್ಥೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿವೇಕನಗರ ತೆಂಕಿಲ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 30 ನವಂಬರ್ 2019 ಹಾಗೂ ಡಿಸೆಂಬರ್ 1 2019 ರಂದು ಅನ್ವೇಷಣಾ 2019 ಅಗ್ರಿ ಟಿಂಕರಿಂಗ್ ಫೆಸ್ಟ್ ಎಂಬ ಕೃಷಿ ಪೂರಕ ನವೀನ ಆವಿಷ್ಕಾರಗಳ ರಾಜ್ಯಮಟ್ಟದ ವಿಜ್ಞಾನ ಮೇಳವನ್ನು ಲಘು ಉದ್ಯೋಗ ಭಾರತಿ ಕರ್ನಾಟಕ ಇವರ ಸಹಯೋಗದೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಆಯೋಜಿಸಲಾಗಿದೆ ಇಂದಿನ ಯುವಜನತೆಯಲ್ಲಿ ಕೃಷಿಕ್ಷೇತ್ರದ ಬಗ್ಗೆ ಆಸಕ್ತಿಯನ್ನು ಮೂಡಿಸಿ, ಬೆಳೆಸುವ ಸಲುವಾಗಿ ವಿದ್ಯಾರ್ಥಿಗಳು ಹಾಗೂ ಕೃಷಿಕರು ಸೃಜನಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂಬ ಮೂಲ ಉದ್ದೇಶದೊಂದಿಗೆ ಈ ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಿರುತ್ತೇವೆ.
ಸಂಪೂರ್ಣ ಸ್ಪರ್ಧಾ ರೂಪದಲ್ಲಿ ಇರುವ ಸದ್ರಿ ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ರಾಷ್ಟ್ರಾದ್ಯಂತ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷವಾಗಿ ಕೃಷಿಕರಿಗೆ ಸಂಬಂಧಪಟ್ಟ ವಯೋಮಾನದ ವಿಭಾಗಗಳಲ್ಲಿ ಅವಿಷ್ಕರಿಸಿರುವ ಕೃಷಿ ಸಂಬಂಧಿತ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಲು ಅವಕಾಶವಿರುತ್ತದೆ.

ಪ್ರಾಯೋಗಿಕವಾಗಿ ಕಾರ್ಯಗತಗೊಳಿಸದ ಬಹುದಾದ ಆವಿಷ್ಕಾರಗಳನ್ನು ಒಂದು ವರ್ಷದ ಅವಧಿಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿ ವಾಣಿಜ್ಯ ಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿ “ಪೇಟೆಂಟ್” ಪಿಪಿಆರ್ ಹಕ್ಕನ್ನು ಒದಗಿಸಿಕೊಡುವ ಹಾಗೂ ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಪ್ರೇರೇಪಿಸುವ ನವೀನ ಯೋಜನೆಯನ್ನು ಹೊಂದಿದ್ದು ವಿಶೇಷವಾಗಿ ಪ್ರತಿ ವಿಭಾಗಗಳಲ್ಲಿ ಉತ್ತಮ 2 ಆವಿಷ್ಕಾರಗಳಿಗೆ ತಲಾ 5000 ದಂತೆ ನಗದು ಬಹುಮಾನ ನೀಡಲುತೀರ್ಮಾನಿಸಲಾಗಿದ್ದು ಆನ್‍ಲೈನ್ ನೋಂದಾವಣೆ ಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ anveshana.vivekanandaedu.org ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20.11.2019.