QR Code Business Card

ಅಭಿನಂದನಾ ಕಾರ್ಯಕ್ರಮ

ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಸ್ಕೌಟ್‌ದಳ ಮತ್ತು ನಿವೇದಿತ ಕಂಪೆನಿಗಳ ವತಿಯಿಂದ ಸಂಸ್ಥೆಯಲ್ಲಿ ಗೈಡ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ ಕು|ಸುದೀನ ಹಾಗೂ ಅಮೇರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಸೇವಾ ಗೈಡ್ ಆಗಿ ಭಾರತವನ್ನು ಪ್ರತಿನಿಧಿಸಿದ ಕು|ಅನುಷಾ ಚೊಕೋಡು ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅತಿಥಿ ಅಭ್ಯಾಗತರನ್ನು ಶಾಲೆಯ ಬ್ಯಾಂಡ್ ಟ್ರೂಪ್‌ನೊಂದಿಗೆ ಅದ್ದೂರಿಯಾಗಿ ವೇದಿಕೆಗೆ ಕರೆತರಲಾಯಿತು. ವೇದಿಕೆಯಲ್ಲಿ ಗ್ರೀನ್‌ವ್ಯೂ ಆಂಗ್ಲಮಾಧ್ಯಮ ಶಾಲೆ, ಸುಳ್ಯ ಇಲ್ಲಿನ ಮುಖ್ಯಗುರುಗಳು ಹಾಗೂ ಹೆಚ್.ಡಬ್ಲ್ಯೂ.ಬಿ ಸ್ಕೌಟ್‌ಮಾಸ್ಟರ್, ಸಂಸ್ಥೆಯ ಪೋಷಕರೂ ಆಗಿರುವ ಶ್ರೀಯುತ ಅಮರನಾಥ್ ಇವರು ಸ್ಕೌಟಿಂಗ್ ಮತ್ತು ಗೈಡಿಂಗ್ ಚಟುವಟಿಕೆಯು ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಎಂದರು. ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಆರ್. ಗೌರಿ ಇವರು ಪುತ್ತೂರು ಸಂಸ್ಥೆಯು ಸ್ಕೌಟಿಂಗ್ ಮತ್ತು ಗೈಡಿಂಗ್‌ಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಅಲ್ಲದೇ ಇಲ್ಲಿ ಪಡೆದಂತಹ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಜೀವನವನ್ನು ಮುನ್ನಡೆಸಬೇಕೆಂದು ಕರೆಯಿತ್ತರು. ಸನ್ಮಾನಿತರ ಪರವಾಗಿ ಕು|ಅನುಷಾ ಚೊಕೋಡುರವರು ಮಾತಾಡಿ ತನ್ನನ್ನು ಬೆಳೆಸಿದ ಸಂಸ್ಥೆಯನ್ನು ಪ್ರಶಂಸಿಸಿದರು. ಕಾರ್ಯಕ್ರಮದ ಇನ್ನೋರ್ವ ಅಭ್ಯಾಗತರಾದ ಆಕಾಂಕ್ಷ ರೈ (Field officer, zilla panchayath, D.K) ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯೆಯಾದ ಶ್ರೀಮತಿ ಸುಧಾರವರು ವಹಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು. ಹಿರಿಯ ಸ್ಕೌಟ್ ವಿದ್ಯಾರ್ಥಿ ಮಾಸ್ಟರ್ ಅಕ್ಷಯ ಸುಬ್ರಹ್ಮಣ್ಯ ಇ, ಮಾಸ್ಟರ್ ರಾಹುಲ್ ನಾಯಕ್, ಹಾಗೂ ಹಿರಿಯ ವಿದ್ಯಾರ್ಥಿನಿ ಕು| ಸ್ವಾತಿಯವರು ಉಪಸ್ಥಿತರಿದ್ದರು. ಕು|ಅನುಷಾ ಹಾಗೂ ಕು|ಸುದೀನ ಇವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಗೈಡ್ ಮೇದಾ.ಸಿ.ಅಡಿಗ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗೈಡ್ ಪ್ರಿಯಲ್ ಆಳ್ವ ವಂದಿಸಿದರು. ಗೈಡ್ ಖುಷಿ ಪುತ್ತೂರಾಯ ಹಾಗೂ ಗೈಡ್ ಸ್ವೀಕೃತ ಕೆ.ಸಿಯವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸ್ಕೌಟ್, ಗೈಡ್, ಕಬ್ ಮತ್ತು ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು. ಪ್ರಾವೀಣ್ಯತಾ ಪದಕ ಪರೀಕ್ಷಕರನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು ಎಂದು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.