QR Code Business Card

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : ಶಾಲೆಯ 3 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ದಿನಾಂಕ 11-12-2019 ರಂದು 27 ನೇ ದ.ಕ ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C) – ’ಜಿಲ್ಲಾಮಟ್ಟದ ವಿಜ್ಞಾನ ಪ್ರಬಂಧ ಮಂಡನೆ’ ಸ್ಪರ್ಧೆಯು ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಅನ್ವಿತ್ ಎನ್. ಮತ್ತು ಪೃಥ್ವಿರಾಜ್, ತಮನ್ ಎಸ್. ಮತ್ತು ಚಿರಾಗ್ ಎಂ. ಎನ್, ಅಭಿಷೇಕ್ ಮತ್ತು ಪ್ರಾಕೃತ್ ಜೂನಿಯರ್ ವಿಭಾಗ ಹಾಗೂ ವರ್ಷಾ ಕೆ. ಮತ್ತು ಹಿತಾ ಕಜೆ, ನೇಹಾ ಭಟ್ ಮತ್ತು ಆಶ್ರಯ ಪಿ., ಪ್ರತೀಕ್ ನಾರಾಯಣ ಮತ್ತು ಸನ್ಮಿತ್ ರಾವ್- ಸೀನಿಯರ್ ವಿಭಾಗ ಹೀಗೆ 6 ತಂಡಗಳು ಭಾಗವಹಿಸಿರುತ್ತಾರೆ.

ಜೂನಿಯರ್ ವಿಭಾಗದಲ್ಲಿ “A novel product by Saloon waste to increase soil fertility” ಶೀರ್ಷಿಕೆಯಡಿ ಅನ್ವಿತ್.ಎನ್ ಮತ್ತು ಪೃಥ್ವಿರಾಜ್ ಪ್ರಥಮ ಸ್ಥಾನ ಹಾಗೂ ಸೀನಿಯರ್ ವಿಭಾಗದಲ್ಲಿ  “Areca-mag ink – an innovative product for better environment” ಶೀರ್ಷಿಕೆಯಡಿ ವರ್ಷಾ ಕೆ. ಮತ್ತು ಹಿತಾ ಕಜೆ-ದ್ವಿತೀಯ, ಮತ್ತು “Eco-friendly Agri-sprayer”  ಶೀರ್ಷಿಕೆಯಡಿ ನೇಹಾ ಭಟ್ ಮತ್ತು ಆಶ್ರಯ ಪಿ., ತೃತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ 6 ತಂಡಗಳಿಗೆ ಮಾರ್ಗದರ್ಶಕರಾಗಿ ಶ್ರೀಮತಿ ರೇಖಾ ಆರ್., ಶ್ರೀಮತಿ ಸಿಂಧು ವಿ. ಜಿ., ಶ್ರೀಮತಿ ದೀಪ್ತಿ ಆರ್. ಭಟ್, ಶ್ರೀ ಶಿವಪ್ರಸಾದ್, ಹಾಗೂ ಶ್ರೀ ರಾಜ್‌ಶೇಖರ್ ಕಾರ್ಯನಿರ್ವಹಿಸಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಿಳಿಸಿರುತ್ತಾರೆ.