QR Code Business Card

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ :  ಸತತ 10ನೇ ಬಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ 27 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ (N.C.S.C) ಸ್ಪರ್ಧೆಯು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದಿದ್ದು, ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು – ಜೂನಿಯರ್ ವಿಭಾಗದಲ್ಲಿ ‘A novel product by Saloon waste to increase soil fertility’ ಶೀರ್ಷಿಕೆಯಡಿ ಅನ್ವಿತ್ ಎನ್. [ಶ್ರೀ ಶ್ರೀಪತಿ ಎನ್ ಮತ್ತು ಶ್ರೀಮತಿ ವಿದ್ಯಾಲಕ್ಷ್ಮೀ ಎ. ಇವರ ಪುತ್ರ] ಮತ್ತು ಪೃಥ್ವಿರಾಜ್ [ಶ್ರೀ ಪುಂಡಲೀಕ ಪ್ರಭು ಮತ್ತು ಶ್ರೀಮತಿ ನಾಗಮಣಿ ಇವರ ಪುತ್ರ], ಸೀನಿಯರ್ ವಿಭಾಗದಲ್ಲಿ ‘Areca-mag ink – an innovative product for better environment’ ಎಂಬ ಶೀರ್ಷಿಕೆಯಡಿ ವರ್ಷಾ ಕೆ. [ಶ್ರೀ ಕೆ. ಎಂ. ಅರವಿಂದ ಭಟ್ ಮತ್ತು ಶ್ರೀಮತಿ ಶುಭಪ್ರದಾ ಇವರ ಪುತ್ರಿ] ಹಾಗೂ ಮತ್ತು ಹಿತಾ ಕಜೆ [ಶ್ರೀ ಕಿರಣ ಕಜೆ ಮತ್ತು ಶ್ರೀಮತಿ ವೀಣಾ ಕಜೆ ಇವರ ಪುತ್ರಿ] ಹಾಗೂ ‘Eco-friendly Agri-sprayer’ ಶೀರ್ಷಿಕೆಯಡಿ ನೇಹಾ ಭಟ್ [ಶ್ರೀ ಮುರಳೀಧರ ಕೆ. ಮತ್ತು ಶ್ರೀಮತಿ ಮೀರಾ ಮುರಳಿ ಇವರ ಪುತ್ರಿ] ಮತ್ತು ಆಶ್ರಯ ಪಿ. [ಶ್ರೀ ಅಶೋಕ್‌ ಕುಂಬ್ಳೆ ಮತ್ತು ಶ್ರೀಮತಿ ಶೋಭಾ ಅಶೋಕ್‌ ಇವರ ಪುತ್ರಿ] ರಾಜ್ಯಮಟ್ಟದಲ್ಲಿ ಭಾಗವಹಿಸಿ ಈ 3 ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

2008 ರಿಂದೀಚೆಗೆ 10 ನೇ ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಭಾಗವಹಿಸಿರುವ ಮೂರು ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಇದು ಈ ಸ್ಪರ್ಧಾ ಇತಿಹಾಸದಲ್ಲಿ ಒಂದು ದಾಖಲೆಯಾಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ ರೈ ಸಂತಸವನ್ನು ಹಂಚಿಕೊಂಡಿದ್ದಾರೆ.