QR Code Business Card

ಇನ್ಸ್ಪೈರ್ ಅವಾರ್ಡ್ – ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ಮೇಳಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 5 ಪ್ರಾಜೆಕ್ಟ್‌ಗಳು ಭಾಗವಹಿಸಲು ಅರ್ಹತೆ ಪಡೆದು ದಿನಾಂಕ 29 ಮತ್ತು 30 ರಂದು ಪಿಲಿಕುಳ ನಿಸರ್ಗಧಾಮ ಮಂಗಳೂರು ಇಲ್ಲಿ ಪ್ರದರ್ಶನ ನೀಡಿರುತ್ತಾರೆ. ಇದರಲ್ಲಿ 8ನೇ ತರಗತಿಯ ತಮನ್. ಎಸ್. ಎನ್‌ ಇವರ ನೀರನ್ನು ಹೀರಿಕೊಳ್ಳುವ ಇಂಟರ್ಲಾಕ್ ಪ್ರಾಜೆಕ್ಟ್‌ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದು ಮಂಡ್ಯ ಜಿಲ್ಲೆಯಲ್ಲಿ ದಿನಾಂಕ 14 ಮತ್ತು 15 ರಂದು ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿಕೊಂಡಿದ್ದಾರೆ. 8ನೇ ತರಗತಿಯ ಚಿರಾಗ್‌ ಎಮ್. ಎನ್. ಇವರ Novel Idea to Prevent Flies at Home, 8 ನೇ ತರಗತಿಯ ಚಿನ್ಮಯ ಕೃಷ್ಣ ವರ್ಮ ಇವರು Natural Mosquito Repellent Using Agricultural Waste And House Hold Waste, 8 ನೇ ತರಗತಿಯ ಸಂಜನ ಪಿ. ಕಲ್ಲುರಾಯ ಇವರ Lipasmaponic system, 7ನೇ ತರಗತಿಯ ನಿನಾದ್‌ ರೈ ಇವರ Solar Tracking System ಪ್ರದರ್ಶನ ನೀಡಿದ್ದಾರೆ. ಇವರಿಗೆ ವಿಜ್ಞಾನ ವಿಭಾಗದ ಶಿಕ್ಷಕಿ ಶಾರದ ಶೆಟ್ಟಿ ಮತ್ತು ಕಂಪ್ಯೂಟರ್ ವಿಭಾಗದ ಶಿಕ್ಷಕ ರಾಜಶೇಖರ್ ಬಿ. ಸಿ. ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.