CET ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ದಿನಾಂಕ 26.08.2020 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಮಗುವಿನ ಪ್ರಾಥಮಿಕ ಬೆಳವಣಿಗೆ ಅತ್ಯಗತ್ಯ. ಅಂತಹ ಪ್ರಕ್ರಿಯೆಗಳು ಶಾಲಾ ಹಂತದಲ್ಲಿ ಸಿಕ್ಕಿದಾಗ ಆ ಮಗು ಭವಿಷ್ಯದ ಸತ್ಪ್ರಜೆಯಾಗಲು ಸಾಧ್ಯ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಶ್ರೀ ರವೀಂದ್ರ ಪಿ. ಹೇಳಿದರು.
ಅವರು CET ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರಿದ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ವಿಜಿತ್ ಕೃಷ್ಣ ಐತಾಳ್, ಗೌರೀಶ ಕಜಂಪಾಡಿ, ಅಕ್ಷಯ್ ಪಾಂಗಾಳ, ಸಾಕ್ಷತ್ ಮತ್ತು ಶಮಾ ಭಟ್ ಇವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸಾಧಕರ ಪರವಾಗಿ ವಿಜಿತ್ ಮತ್ತು ಗೌರೀಶ್ ಹಾಗೂ ಪೋಷಕರ ನೆಲೆಯಲ್ಲಿ ಸೀತಾರಾಮ ಗೌಡ, ಸುಬ್ರಹ್ಮಣ್ಯ ಭಟ್ ಮತ್ತು ರಾಜ ನಂದಿನಿ ಅನಿಸಿಕೆ ವ್ಯಕ್ತಪಡಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಚಾಲಕರಾದ ಶ್ರೀ ಮುರಳೀಧರ ಹಾಗೂ ಶ್ರೀ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ, ಶಿಕ್ಷಕೇತರ ವೃಂದದವರು ಸಹಕರಿಸಿದರು.