ಭಾರತೀಯತೆಯನ್ನು ಭಾವೀ ಪೀಳಿಗೆಯ ಮನದಾಳದಲ್ಲಿ ಬೇರೂರಿಸುವ ಮಹಾನ್ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥಾಪನೆಯಾಗಿರುವ ಭಾರತಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ಪ್ರತಿ ವರ್ಷ 9ನೇ ತರಗತಿಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಹಾಭಾರತ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕಳೆದ ಶೈಕ್ಷಣಿಕ ವರ್ಷ 2019-20 ರಲ್ಲಿ ನಡೆದ ಈ ಪರೀಕ್ಷೆಯಲ್ಲಿ ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷಾ ಎ.ಕೆ. 98 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ಈಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉದ್ಯೋಗಿ ಆನಂದ ಗೌಡ ಮತ್ತು ಸಾವಿತ್ರಿ ದಂಪತಿಯ ಪುತ್ರಿ. ಭಾರತ ಸಂಸ್ಕೃತಿ ಪ್ರತಿಷ್ಠಾನದ ವತಿಯಿಂದ ಈಕೆಗೆ ಪ್ರಶಸ್ತಿ ಫಲಕ, ಪುಸ್ತಕಗಳು, ಲೇಖನಿ, ಬೆಳ್ಳಿಯ ಪದಕವನ್ನು ನೀಡಿ ಗೌರವಿಸಲಾಗಿದೆ. ಸಂಸ್ಕೃತ ಅಧ್ಯಾಪಿಕೆ ಹಾಗೂ ಶಾಲಾ ಸಂಯೋಜಕರಾಗಿರುವ ಶ್ರೀಮತಿ ಮಧುರಾಜೋಷಿ ಮತ್ತು ಶ್ರೀಮತಿ ಸೌಮ್ಯಲತಾ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.