QR Code Business Card

10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯಳಿಗೆ NTSE ಪರೀಕ್ಷೆಯಲ್ಲಿ 20 ನೇ ರ್‍ಯಾಂಕ್

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ ) ವತಿಯಿಂದ 25-01-2021 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಟ್ಟ ರಾಜ್ಯಮಟ್ಟದ N.T.S.E. ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ 10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ. (ಚೇತನ ಸ್ಟುಡಿಯೋದ ಅಶೋಕ ಕುಂಬ್ಳೆ ಹಾಗೂ ಆಶ್ರಯ ಕೋಚಿಂಗ್ ಸೆಂಟರ್ ನ ಮಾಲಕಿ ಶೋಭಾ ದಂಪತಿಗಳ ಪುತ್ರಿ) ರಾಜ್ಯಮಟ್ಟದಲ್ಲಿ 20ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ. ರಾಷ್ಟ್ರಮಟ್ಟದ ಎರಡನೇ ಹಂತದ ಪರೀಕ್ಷೆಗೆ ಅರ್ಹತೆಯನ್ನು ಪಡೆದಿರುತ್ತಾಳೆ. ರಾಜ್ಯಾದ್ಯಂತ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯಾಗಿದ್ದು ಇದರಲ್ಲಿ ಆಶ್ರಯ 140 ಅಂಕಗಳನ್ನು ಪಡೆದಿರುತ್ತಾರೆ. ಈ ವರ್ಷ ಗಣರಾಜ್ಯೋತ್ಸವದಂದು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ಗೈಡ್ಸ್ ‌ತಂಡದ ಸಕ್ರಿಯ ಸದಸ್ಯೆಯಾಗಿರುವ ಈಕೆ ಬಹುಮುಖ ಪ್ರತಿಭೆಯ ವಿದ್ಯಾರ್ಥಿಯಾಗಿರುತ್ತಾಳೆ.