QR Code Business Card

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಶಾಲೆಯ 2 ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಯೋಗದಲ್ಲಿ ರಾಜ್ಯದಲ್ಲಿ 28 ನೇ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17 ವರ್ಷ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿತ್ತು. ಫಲಿತಾಂಶ ಕುರಿತಂತೆ ದಿನಾಂಕ 2-3, ಆಗಸ್ಟ್ 2021 ರಂದು ಕರ್ನಾಟಕ ವಿಜ್ಞಾನ ಪರಿಷತ್ತಿನಲ್ಲಿ ತಜ್ಞ ಮೌಲ್ಯಮಾಪಕರಿಂದ ಯೋಜನಾ ವರದಿಯನ್ನು ಆನ್‌ಲೈನ್ ಮೂಲಕ ಮೌಲ್ಯಮಾಪನ ಮಾಡಿಸಿ ರಾಷ್ಟ್ರಮಟ್ಟಕ್ಕೆ ಬಾಲವಿಜ್ಞಾನಿಗಳ 30 ತಂಡಗಳು ಆಯ್ಕೆಯಾಗಿರುತ್ತವೆ.

ಜುಲೈ ತಿಂಗಳಲ್ಲಿ ನಡೆದ 28 ನೇ ರಾಜ್ಯಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C) ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 3 ತಂಡಗಳು ಭಾಗವಹಿಸಿದ್ದು, 2 ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಜೂನಿಯರ್ ವಿಭಾಗದಲ್ಲಿ Cocoa Outer Shell Malt powder ಶೀರ್ಷಿಕೆಯಡಿ, 8 ನೇ ತರಗತಿ ವಿದ್ಯಾರ್ಥಿಗಳಾದ ಧಾತ್ರಿ.ಸಿ.ಎಚ್ (ಡಾ. ದಿನೇಶ್ ಸಿ ಹೆಚ್ ಮತ್ತು ಶ್ರೀಮತಿ ಪದ್ಮಲಕ್ಷ್ಮಿ ಇವರ ಪುತ್ರಿ) ಮತ್ತು ಕ್ಷಮ ವೈ (ಡಾ. ಮಹೇಶ್ ಕುಮಾರ್ ವೈ ಮತ್ತು ಡಾ. ಮಾಲಾ ಮಹೇಶ್ ವೈ ಇವರ ಪುತ್ರಿ) ಇವರು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೆಯೇ ಸೀನಿಯರ್ ವಿಭಾಗದಲ್ಲಿ Indian Space Research & Army Secutiry-ISRAAS ಶೀರ್ಷಿಕೆಯಡಿ 9 ನೇ ತರಗತಿ ವಿದ್ಯಾರ್ಥಿಗಳಾದ ತಮನ್.ಎಸ್.ಎನ್ (ಶ್ರೀ ಸುರೇಂದ್ರ ಎ ಮತ್ತು ಶ್ರೀಮತಿ ನಳಿನ ಕುಮಾರಿ ಇವರ ಪುತ್ರ) ಮತ್ತು ಚಿರಾಗ್.ಎಂ.ಎನ್ (ಪೆರ್ಲಂಪಾಡಿ ನಿವಾಸಿ ಶ್ರೀ ನಾರಾಯಣ ಎಂ ಮತ್ತು ಶ್ರೀಮತಿ ನಳಿನಿ ಎಂ.ಎನ್ ಇವರ ಪುತ್ರ) ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸೀನಿಯರ್ ವಿಭಾಗದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಾದ ಆದ್ಯ ಸುಲೋಚನಾ ಮುಳಿಯ (ಶ್ರೀ ಕೇಶವ ಪ್ರಸಾದ್ ಮುಳಿಯ ಮತ್ತು ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರ ಪುತ್ರಿ) ಮತ್ತು ವರ್ಷ.ಕೆ (ಶ್ರೀ ಅರವಿಂದ ಭಟ್ ಕೆ ಮತ್ತು ಶ್ರೀಮತಿ ಶುಭಪ್ರದಾ ಇವರ ಪುತ್ರಿ) ಇವರು ಭಾಗವಹಿಸಿರುತ್ತಾರೆ. ಹೀಗೆ 3 ತಂಡಗಳು ಭಾಗವಹಿಸಿರುತ್ತವೆ.

ಶಾಲಾ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಎಲ್ಲಾ 3 ತಂಡಗಳ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡನೆ ಮಾಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಜೂನಿಯರ್‌ ವಿಭಾಗ

ಸೀನಿಯರ್‌ ವಿಭಾಗ