ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇದರ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭವು ದಿನಾಂಕ 15-11-2021 ನೇ ಸೋಮವಾರ ಶಾಲಾ ಆಡಳಿತ ಕಚೇರಿಯಲ್ಲಿ ನಡೆಯಿತು.
ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ| ಕೆ. ಎಂ. ಕೃಷ್ಣ ಭಟ್ ಅವರು ಪ್ರತಿಜ್ಞಾವಿಧಿ ಬೋಧಿಸುವುದರ ಮೂಲಕ ಸೇವಾ ದೀಕ್ಷಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಡಾ. ಶಿವಪ್ರಕಾಶ್ ಎಂ., ನೂತನ ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡ ಶ್ರೀ ರವಿನಾರಾಯಣ ಎಂ, ಖಜಾಂಜಿಯಾಗಿ ನಿಯುಕ್ತರಾದ ಶ್ರೀ ಕೃಷ್ಣ ಮೋಹನ್.ಪಿ.ಎಸ್ ಮತ್ತು ನೂತನ ಸದಸ್ಯರಾದ ಶ್ರೀ ನಾಗೇಶ್ ಪ್ರಭು, ಶ್ರೀ ಗೋವರ್ಧನಕುಮಾರ್ ವಿಟ್ಲ, ಶ್ರೀಮತಿ ಮಾಲಾ ಮಹೇಶ್ ವೈ., ಶ್ರೀಮತಿ ಡಾ. ಅಮೃತ ಪ್ರಸಾದ್ ಹಾಗೂ ಸದಸ್ಯರಾದ ಶ್ರೀ ಹರೇಕೃಷ್ಣ, ಶ್ರೀ ಚಂದ್ರಶೇಖರ ಎಸ್. ಇವರುಗಳು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಹಿರಿಯ ಸದಸ್ಯರಾದ ಶ್ರೀಬಿರ್ಮಣ್ಣ ಗೌಡ ಅವರು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ನಿರ್ದೇಶಕರಾದ ಶ್ರೀ ಮುರಳಿಧರ್ ಕೆ. ಹಾಗೂ ಶ್ರೀ ಶಿವಪ್ರಸಾದ್ ಇ. ಉಪಸ್ಥಿತರಿದ್ದರು. ನೂತನ ಸಂಚಾಲಕರಾದ ಶ್ರೀ ರವಿನಾರಾಯಣ ಎಂ. ಅವರು ಅಧ್ಯಾಪಕ ಸಮೂಹವನ್ನು ಉದ್ಧೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.