ಡಿಸೆಂಬರ್ 20 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವ್ ಹಾಗೂ Unsung Heroes of freedom struggle and My vision for India in 2047 ಎನ್ನುವ ಅಂಚೆ ಪತ್ರ ಬರಹ ಅಭಿಯಾನ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಕಾರದೊಂದಿಗೆ ಜರುಗಿತು.
ಕಾರ್ಯಕ್ರಮದ ಅಂಗವಾಗಿ “75 AZADI KI AMRIT MAHOTSAV” ಎಂಬ ಬರವಣಿಗೆಯನ್ನು 1600 ವಿದ್ಯಾರ್ಥಿಗಳನ್ನು ಜೋಡಿಸಿಕೊಂಡು ಶಾಲಾ ಕ್ರೀಡಾಂಗಣದಲ್ಲಿ ಬಹಳ ಮನಮೋಹಕವಾಗಿ ಜೋಡಿಸಲಾಗಿತ್ತು. ವಿದ್ಯಾರ್ಥಿಗಳೆಲ್ಲ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ ಪುತ್ತೂರು ಡಾ. ಏಂಜೆಲ್ ರಾಜ್ ರವರು ಮಾತನಾಡಿ ಭಾರತೀಯ ಅಂಚೆ ಇಲಾಖೆಯು Unsung Heroes of freedom struggle and My vision for India in 2047 ಎಂಬ ಪರಿಕಲ್ಪನೆಯ ಕುರಿತು ಮಕ್ಕಳಲ್ಲಿ ಇರುವ ಸೃಜನಶೀಲ ಬರವಣಿಗೆಯನ್ನು ಹೊರತರುವ ನಿಟ್ಟಿನಲ್ಲಿ ತುಂಬ ಉಪಯುಕ್ತವಾದದ್ದು ಎಂದು ಹೇಳಿದರು.
ವೇದಿಕೆಯಲ್ಲಿ ಜೋಸೆಫ್ ರೋಡ್ರಿಗಸ್ ಸಹಾಯಕ ಅಂಚೆ ಅಧೀಕ್ಷಕರು ಪುತ್ತೂರು ವಿಭಾಗ ಪುತ್ತೂರು, ಗುರುಪ್ರಸಾದ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪುತ್ತೂರು ವಿಭಾಗ ಪುತ್ತೂರು, ರೋಹನ್ ಮೂವೀಸ್ ವಿಭಾಗಿಯ ತರಬೇತುದಾರರು ಪುತ್ತೂರು ವಿಭಾಗ, ಪುತ್ತೂರು, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಸಂಧ್ಯಾ, ಮತ್ತು ಹಿರಿಯ ಶಿಕ್ಷಕಿಯಾದ ಶ್ರೀಮತಿ ಪುಷ್ಪಲತಾ ಬಿಕೆ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ವಂದಿಸಿ ಶ್ರೀಮತಿ ಅನುರಾಧ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ ಬಿ, ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶಿಕ್ಷಕ ಶಿಕ್ಷಕೇತರ ಸಹಕರಿಸಿದರು.