Science Society of India ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಪ್ರತೀ ವರ್ಷ ನಡೆಸುವ INSEF ಪ್ರಾದೇಶಿಕ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಕೆಳಗಿನ 2 ಯೋಜನೆಗಳು ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿವೆ.
9 ನೇ ತರಗತಿಯ ಅನ್ವಿತ್ ಎನ್ (ಶ್ರೀ ಶ್ರೀಪತಿ ಎನ್. ಹಾಗೂ ಶ್ರೀಮತಿ ವಿದ್ಯಾಲಕ್ಷ್ಮಿ.ಎ. ದಂಪತಿಯ ಪುತ್ರ.) ಆವಿಷ್ಕರಿಸಿದ ‘A herbal spray from weed, Wedelia trilobata to repell household vegetable pests’, ಒಂದು ನೈಸರ್ಗಿಕ ಕೀಟನಾಶಕವಾಗಿದ್ದು, ಸ್ಥಳೀಯವಾಗಿ ಸುಲಭವಾಗಿ ತಯಾರಿಸುವಂತಿದ್ದು, ಹೆಚ್ಚು ಪರಿಣಾಮಕಾರಿ.
8ನೇ ತರಗತಿಯ ಸಾನ್ವಿ ಎಸ್. ಪಿ. (ಶ್ರೀ ಸುಂದರ ಪೂಜಾರಿ ಹಾಗೂ ಶ್ರೀಮತಿ ಭವಿತಾ ಪಿ. ದಂಪತಿಯ ಪುತ್ರಿ) ಮತ್ತು ಜಿ ಪ್ರತೀಕ್ಷಾ ಆಳ್ವ(ಶ್ರೀ ಚಂದ್ರಶೇಖರ ಆಳ್ವ ಹಾಗೂ ಶ್ರೀಮತಿ ಉಷಾ ಸಿ ಆಳ್ವ ದಂಪತಿಯ ಪುತ್ರಿ) ಆವಿಷ್ಕರಿಸಿದ Multipurpose agricultural solar dryer’ ಯೋಜನೆಯು ಅತ್ಯಂತ ಕಡಿಮೆ ಸ್ಥಳದಲ್ಲಿ ಅಡಿಕೆ ಒಣಗಿಸುವ ಆಧುನಿಕ ಮಾದರಿಯಾಗಿದ್ದು, ಪ್ರತಿಕೂಲ ಹವಾಮಾನಕ್ಕೆ ಹೊಂದಿಕೊಂಡು ಅಡಿಕೆ ಒಣಗಿಸುವಲ್ಲಿ ಸಹಕಾರಿ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.