ಜನವರಿ 6 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಭಾರತೀಯ ಸೇನೆಯ 15 ನೇ ಬೆಟಾಲಿಯನ್ನ ಜಾಟ್ ರೆಜಿಮೆಡ್ನ ಮೇಡಿಕಲ್ ಆಫೀಸರ್, ಪ್ರಸ್ತುತ ಕಾರ್ಗಿಲ್ ಬೆಟಾಲಿಯನ್ ಸೆಕ್ಟರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಅನಿತೇಜ್ ರಾವ್ ರವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ನಂತರ ಮಾತನಾಡಿದ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಬಾಲ್ಯದ ದಿನಗಳು ನಿಜಕ್ಕೂ ಅದ್ಭುತವಾದುದು, ಇಲ್ಲಿನ ಆಚಾರ-ವಿಚಾರ , ಶಿಕ್ಷಕರ ಮಾರ್ಗದರ್ಶನ, ಸಂಸ್ಕಾರ, ಸಂಸ್ಕೃತಿಗಳು ಇಂದು ನನ್ನನು ಈ ಮಟ್ಟಕ್ಕೆ ಏರುವುದಕ್ಕೆ ಕಾರಣವಾಗಿದೆ. ನಿಜಕ್ಕೂ ನನ್ನನ್ನು ತಿದ್ದಿ ತೀಡಿ ನನ್ನನ್ನು ಆರ್ಶಿವದಿಸಿ, ಮಾರ್ಗದರ್ಶನ ನೀಡಿದ ಎಲ್ಲಾ ಅಧ್ಯಾಪಕರ ವೃಂದಕ್ಕೆ ಚಿರಖುಣಿಯಾಗಿದ್ದೇನೆ ಎಂದು ಹೇಳಿದರು. ನಂತರ ಶಾಲಾ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೃಷ್ಣ ಮೋಹನ್, ಹಿರಿಯ ಶಿಕ್ಷಕರಾದ ಶ್ರೀ ಪ್ರಶಾಂತ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ಶ್ರೀಮತಿ ಅನುರಾಧರವರು ವಂದಿಸಿದರು.