ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯಲ್ಲಿ 29ನೇ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17 ರ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ವರದಿಗಳ ಮೌಲ್ಯಮಾಪನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಜ್ಞ ಮೌಲ್ಯಮಾಪಕರ ತಂಡ ಮಾಡಿರುತ್ತದೆ.
ಡಿಸೆಂಬರ್ ತಿಂಗಳಲ್ಲಿ ನಡೆದ 29 ನೇ ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C) ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 8 ತಂಡಗಳು ಭಾಗವಹಿಸಿದ್ದು, 2 ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಜೂನಿಯರ್ ವಿಭಾಗದಲ್ಲಿ Cash from the cashew waste ಶೀರ್ಷಿಕೆಯಡಿ, 8ನೇ ತರಗತಿ ವಿದ್ಯಾರ್ಥಿಗಳಾದ ಪ್ರಮಥ. ಎಂ.ಭಟ್ (ಪುತ್ತೂರು ಮೈತ್ರಿ ಇಲ್ಕ್ಟ್ರಿಲ್ಸ್ನ ಮಾಲಕ ಶ್ರೀ ರವಿನಾರಾಯಣ.ಎಂ ಮತ್ತು ಶ್ರೀಮತಿ ಶರಾವತಿ ರವಿನಾರಾಯಣ ಇವರ ಪುತ್ರ) ಮತ್ತು ವಿಶ್ರುತ್ ರೈ (ಮಣಿಯ ನಿವಾಸಿ ಕೃಷಿಕ ಶ್ರೀ ಗಿರೀಶ್ ರೈ ಮತ್ತು ಸುಪ್ರೀತ ರೈ ಇವರ ಪುತ್ರ್ರ) ಹಾಗೂ ಸೀನಿಯರ್ ವಿಭಾಗದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿತ್.ಎನ್ (ಮುಡೋಡಿ ನಿವಾಸಿ ಶ್ರೀ ಶ್ರೀಪತಿ.ಎನ್ ಮತ್ತು ಶ್ರೀಮತಿ ವಿದ್ಯಾಲಕ್ಷ್ಮೀ.ಎ ಇವರ ಪುತ್ರ) ಹಾಗೂ ಸಮರ್ಥರಾಮ ರೈ (ಮೊದೆಲ್ಕಾಡಿ ಶ್ರೀ ಸತೀಶ್ ಕುಮಾರ್ ರೈ ಮತ್ತು ಪ್ರಗತಿ.ಎಸ್.ರೈ ಇವರ ಪುತ್ರ) ಇವರ ‘A herbal spray from weed, Wedelia trilobata: to repell household vegetable pests’, ಇವರು ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶಾಲಾ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡನೆ ಮಾಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.