ಪೂರ್ವ ರೋಟರಿ ಕ್ಲಬ್ ಪುತ್ತೂರು R.I.Dist.3181 ಇದರ ವತಿಯಿಂದ 2022-23 ನೇ ಸಾಲಿನಲ್ಲಿ 10 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಪ್ರಥಮ, ದ್ವಿತೀಯ ಸ್ಥಾನಿಗಳಾಗಿ ಹೊರಹೊಮ್ಮಲು ಕಾರಣೀಭೂತರಾದ ಗುರು ವೃಂದವನ್ನು ಗುರುತಿಸಿ ಸನ್ಮಾನಿಸುವ ’ಗುರುವಂದನೆ’ ಕಾರ್ಯಕ್ರಮವು ದಿನಾಂಕ 23-05-2022 ನೇ ಸೋಮವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ 10 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಇದರೊಂದಿಗೆ 10 ನೇ ತರಗತಿಯ ಮಕ್ಕಳ ಯಶಸ್ಸಿಗೆ ಕಾರಣೀಭೂತರಾದ ಶಿಕ್ಷಕರನ್ನು ಹಾಗೂ ಮುಖ್ಯಗುರುಗಳನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋ| ಪ್ರಕಾಶ್ ಕಾರಂತ್ (Dist. Governor Elect) ಅವರು ಸಾಧಕರನ್ನು ಹಾಗೂ ಸಾಧನೆಗೆ ಕಾರಣೀಭೂತರಾದ ಅಧ್ಯಾಪಕ ಸಮೂಹವನ್ನು ಸನ್ಮಾನಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಿಸಿಕೊಂಡು ಸಾಧಕರಾಗುವ ಮನೋಭಾವವನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸಿದರು. ವೃತ್ತಿಗಳಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿರುವ ಅಧ್ಯಾಪನ ವೃತ್ತಿಯ ಮಹತ್ವದ ಬಗ್ಗೆ ಮಾತನಾಡುತ್ತಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಕ ಶಕ್ತಿಯಾದ ಅಧ್ಯಾಪಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಡಾ.ದೀಪಕ್ ರೈ, ರೋ| ಎ.ಜೆ.ರೈ, ಡಾ.ಶಿವಪ್ರಕಾಶ್.ಎಂ (ಅಧ್ಯಕ್ಷರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು) ಶ್ರೀ ರವಿನಾರಾಯಣ.ಎಂ (ಸಂಚಾಲಕರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು), ರೋ| ಶಶಿಧರ್ ಕಿನ್ನಿಮಜಲು, ರೋ| ಶರತ್ ಕುಮಾರ್ ರೈ, ರೋ| ವೆಂಕಟೇಶ್ ಶೆಣೈ, ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಮಮತಾ ಹಾಗೂ ಶ್ರೀಮತಿ ಸಂಧ್ಯಾ, ಇವರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಡಾ.ದೀಪಕ್ ರೈ ಇವರು ಮಾತನಾಡಿ, ಸಾಧಕ ವಿದ್ಯಾರ್ಥಿಗಳು ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ಶಿಕ್ಷಕರನ್ನು ಶ್ಲಾಫಿಸಿದರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಶಾಲೆಯ ಹಿರಿಯ ವಿದ್ಯಾರ್ಥಿ ಶ್ರೀ ವೆಂಕಟೇಶ್ ಶೆಣೈ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಿರಿಯ ಶಿಕ್ಷಕರಾದ ಶ್ರೀ ರಾಧಕೃಷ್ಣ ರೈ ಸಾಧಕ ವಿದ್ಯಾರ್ಥಿಗಳಾದ ಆತ್ಮೀಯ ಕಶ್ಯಪ್, ಮಯೂರ್ ಹಾಗೂ ಸಂಸ್ಥೆಯ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ಅವರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರೋ. ಪ್ರಕಾಶ್ ಕಾರಂತ್ ಈ ಸಂದರ್ಭದಲ್ಲಿ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ರೋ. ಶರತ್ ಕುಮಾರ್ ರೈ ಸ್ವಾಗತಿಸಿ, ರೋ.ಶಶಿಧರ್ ಕಿನ್ನಿಮಜಲು ವಂದಿಸಿದರು. 10ನೇ ತರಗತಿಯ ವಿದ್ಯಾರ್ಥಿನಿಯಾದ ಕು.ತನ್ವಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಹೆಗ್ಡೆ Dist.Secretary RID.3181 A.G ಕೆ.ವಿ.ಶೆಣೈ, A.G ಸಚ್ಚಿದಾನಂದ, ಕರ್ನಲ್ ಡಿ.ಜಿ.ಭಟ್, ನಿಕಟಪೂರ್ವ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಾಧಕ ವಿದ್ಯಾರ್ಥಿಗಳ ಪೋಷಕರು, ಹಾಗೂ ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ರೋ| ವಿಶ್ವಾಸ್ ಶೆಣೈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.