ದಿನಾಂಕ 31/05/22 ನೇ ಮಂಗಳವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವ ಶ್ರೀ ಸಭಾಂಗಣದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ 625ರಲ್ಲಿ 625 ಅಂಕ ಪಡೆದ ವಿದ್ಯಾರ್ಥಿಗಳಾದ ಆತ್ಮೀಯ ಕಶ್ಯಪ್, ಅಭಯ್ ಶರ್ಮ, ಅಭಿಜ್ಞ ಆರ್. ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಆಡಳಿತ ಮಂಡಳಿಯ ಮಾತಿನಂತೆ ಲ್ಯಾಪ್ಟಾಪ್ ನೀಡಿ ಸನ್ಮಾನಿಸಿದರು. ಹಾಗೂ ಆ ಬ್ಯಾಚ್ನ ಎಲ್ಲಾ 232 ಮಂದಿ ವಿದ್ಯರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಪ್ರಶಾಂತ್ ಭಟ್ ಸಾಧಕರ ಹೆಸರನ್ನು ಓದಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಹಿರಿಯ ಸದಸ್ಯರಾದ ಶ್ರೀನಿವಾಸ ಪೈ ರವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಾಧನೆ ಎಲ್ಲರನ್ನು ತಿರುಗಿ ನೋಡುವಂತೆ ಮಾಡಿದೆ. ಶಿಕ್ಷಕರ ಶ್ರಮ ನಿಜಕ್ಕೂ ಶ್ಲಾಘನೀಯ, ನೆರೆದಿರುವ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಕಳುಹಿದಕ್ಕೆ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ. ಸಂಸ್ಥೆಯ ಸ್ಥಾಪನೆಯ ಪ್ರೇರಕ ಶಕ್ತಿಯಾಗಿದ್ದ ದಿ| ರಾಮ ಭಟ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಪ್ರಥಮ ಅಧ್ಯಕ್ಷರಾಗಿದ್ದ ದಿ| ಶ್ರೀ ನಾರಾಯಣ ರೈ ಅವರ ಸೇವೆಯ ಸ್ಮರಣೆ ಮಾಡಿದರು.
ಸಾಧನೆ ತೋರಿದ ವಿದ್ಯಾರ್ಥಿಗಳ ಪೋಷಕರಾದ ಡಾಕ್ಟರ್ ರಾಜೇಶ್ ರವರು ಮಾತನಾಡಿ , ಮಕ್ಕಳ ಸಾಧನೆ ಯನ್ನು ಗುರುತಿದ್ದಕ್ಕೆ ಶಾಲೆಗೆ ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕ ವೃಂದಕ್ಕೆ ಧನ್ಯವಾದಗಳು, ಈ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ನುಡಿದರು.
ಅತಿಥಿಗಳಾಗಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಪೂರ್ವಾಧ್ಯಕ್ಷರು ಹಿರಿಯರು ಆದ ಶ್ರೀ ರಂಗಮೂರ್ತಿಯವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಿರಿಯರು ಹಾಕಿದ ಶ್ರಮ ಇಂದು ಸಾರ್ಥಕ ಅನಿಸುತಿದೆ. ನಮ್ಮ ಶಾಲೆಯೂ ರಾಜ್ಯದ ಇತರ ಶಾಲೆಗಳಿಗಿಂತ ಭಿನ್ನ ವಾಗಿರುವ ಶಾಲೆಯಾಗಿದೆ. ನಮ್ಮ ದೇಶವನ್ನು ಪರಮ ವೈಭವ ಕ್ಕೆ ತರಬೇಕಾದರೆ ನಮ್ಮ ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಯನ್ನು ತೋರಿಸಬೇಕು ಎಂದು ನುಡಿದರು.
ಸಾಧಕ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಆತ್ಮೀಯ ಕಶ್ಯಪ್ ನನ್ನ ಈ ಸಾಧನೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನ, ಹಾಗೂ ಈ ಶಾಲೆಯಲ್ಲಿ ಕಲಿತ ಸಂಸ್ಕಾರ, ಸಂಸ್ಕೃತಿ ಗಳು ನನ್ನನ್ನು ಈ ಮಟ್ಟಕ್ಕೆ ಬೆಳೆಸಿತು ಎಂದು ಹೇಳಿದನು. ಅತಿಥಿಯಾಗಿ ಮಾತನಾಡಿದ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಕುಮಾರ್ ಜೈನ್ ಈ ಸಾಧನೆಗೆ ಕಾರಣಕರ್ತರಾದ ನಮ್ಮ ಶಾಲಾ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಯನ್ನು ಸಲ್ಲಿಸುತ್ತೇನೆ, ಶಿಕ್ಷಕರ ಮಾರ್ಗದರ್ಶನ, ಅವಿರತ ಶ್ರಮದ ಫಲವಾಗಿ ಇಂದು ನಾವು ಸಂಭ್ರಮಿಸುವಂತಾಗಿದೆ. ಎಂದು ನುಡಿದರು.
ಈ ಸಂದರ್ಭದಲ್ಲಿ ಸಾಧನೆ ಮಡಿದ ಮಕ್ಕಳಾದ ಪ್ರಣಮ್ – ಪ್ರಥಮ್, ಆತ್ಮೀಯ ಕಶ್ಯಪ್, ಶರೀಕಾ ರಾಜಲಕ್ಷ್ಮಿ, ಅಶ್ವಿನಿ ಪ್ರಭು ಇವರ ಪೋಷಕರು ಶಾಲೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಗಳಾದ ಶ್ರೀ ಅಚ್ಚುತ ನಾಯಕ್ ರವರು ಮಾತನಾಡುತ್ತಾ ವಿವೇಕಾನಂದ ಆಂಗ್ಲ ಮಾಧ್ಯಮದ ಇತಿಹಾಸದಲ್ಲಿ ಇದು ಸ್ಮರಣೀಯ ಕ್ಷಣ. ಇದಕ್ಕೆ ಕಾರಣಕರ್ತರಾದ ಶಾಲಾ ಆಡಳಿತ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕೀರ್ತಿಯನ್ನು ದಶದಿಕ್ಕುಗಳಿಗೆ ಹಬ್ಬಿಸಿದ್ದು ಶ್ಲಾಘನೀಯ. ಆಂಗ್ಲ ಮಾಧ್ಯಮವಾದರೂ ಇಲ್ಲಿನ ಮಕ್ಕಳಿಗೆ ನೀಡುವ ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಪರಿಪೂರ್ಣವಾದುದು. ಈ ಸಾಧನೆ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು.
ಶಾಲಾ ಆಡಳಿತ ಅಧ್ಯಕ್ಷರು ಮಾತನಾಡಿದ ಡಾ.ಶಿವಪ್ರಕಾಶ್.ಎಂ ರವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು, ಸಾಧನೆ ನಿಂತ ನೀರಲ್ಲ ಅದು ಇನ್ನೂ ಮುಂದುವರಿಯಬೇಕು, ಈಗಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇದು ಮಾದರಿಯಾಗಲಿ ಎಂದರು. ವೇದಿಕೆಯಲ್ಲಿ ಶಾಲಾ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಆಡಳಿತ ಮಂಡಳಿ ಯ ಸಂಚಾಲಕರಾದ ಶ್ರೀ ರವಿನಾರಾಯಣ.ಎಂ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ಸಂಧ್ಯಾ ವಂದಿಸಿ, ಶಿಕ್ಷಕಿಯರಾದ ಶ್ರೀಮತಿ ಅನುರಾಧ ಹಾಗೂ ಶ್ರೀಮತಿ ಶಾಂತಿ ಕಾರ್ಯಕ್ರಮ ನಿರೂಪಿಸಿದರು.