QR Code Business Card

ಕೇಸರಿ ದಿನ ಆಚರಣೆ

ದಿನಾಂಕ 22-07-2022 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲದಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಕೇಸರಿ ದಿನವನ್ನು ಆಚರಿಸಲಾಯಿತು. ಶಾಲೆಯ ಪುಟಾಣಿಗಳು ಕೇಸರಿ ಬಣ್ಣದ ಉಡುಗೆಯನ್ನು ತೊಟ್ಟು ಸಂಭ್ರಮದಿಂದ ಮಿನುಗಿದರು. ತರಗತಿಗಳನ್ನು ಕೇಸರಿ ಬಣ್ಣದ ವಸ್ತುಗಳಿಂದ ಸಿಂಗರಿಸಲಾಗಿತ್ತು. ಶಿಕ್ಷಕಿಯರು ಮಕ್ಕಳಿಗೆ ಕೇಸರಿ ಬಣ್ಣದ ಹಲವು ವಸ್ತುಗಳ ಪರಿಚಯ ಮಾಡಿ, ಕೇಸರಿ ಬಣ್ಣದ ಮಹತ್ವದ ಬಗ್ಗೆ ತಿಳಿಸಿದರು. ಮಕ್ಕಳಿಗೆ ಶಿಕ್ಷಕಿಯರು ಕೇಸರಿ ಬಣ್ಣಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಆಯೋಜಿಸಿದ್ದರು. ಕೇಸರಿ ಬಣ್ಣವು ಉತ್ಸಾಹ, ಭರವಸೆ ಮತ್ತು ಧೈರ್ಯದ ಪ್ರತೀಕವಾಗಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ.ಕೃಷ್ಣ ಭಟ್ ಶಾಲೆಗೆ ಭೇಟಿ ನೀಡಿ ಕೇಸರಿ ದಿನದ ಆಚರಣೆಯ ಬಗ್ಗೆ ಪ್ರಶಂಸನೀಯ ನುಡಿಗಳ್ನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ, ಸಂಚಾಲಕರಾದ ಶ್ರೀ ರವಿನಾರಾಯಣ.ಎಂ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.