ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಸಾಮಾಜಿಕ ಸಹಬಾಳ್ವೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಗೋಸ್ತು, ಸಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜನಿಸಿರುವ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ದಿನಾಂಕ 01-11-2013ರಂದು ಆಚರಿಸಲಾಯಿತು.
ಹೆತ್ತವರ ಸಮ್ಮುಖದಲ್ಲಿ ಮಕ್ಕಳಿಗೆ ದೀಪಾರತಿ, ತಿಲಕಧಾರಣೆ, ಹಾಗೂ ದೇವರಿಗೆ ಪುಷ್ಪಾರ್ಚನೆ, ವಿಧಿಯುಕ್ತವಾಗಿ ನೆರವೇರಿತು. ಮಕ್ಕಳು ತಮ್ಮ ಹೆತ್ತವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಮುಖ್ಯ ಅತಿಥಿಯಾದ ಶ್ರೀ ರಾಜಾರಾಮ ನೆಲ್ಲಿತ್ತಾಯರು ಮಾತನಾಡಿ ಮಕ್ಕಳಿಗೆ ಸಂಸ್ಕಾರವನ್ನು ತಿಳಿಸಿಕೊಡುವುದರಲ್ಲಿ ಶಾಲೆ ಮತ್ತು ಹೆತ್ತವರು ಅತ್ಯಂತ ಮುಖ್ಯಪಾತ್ರರು ಎಂದು ನುಡಿದರು. ಅಧ್ಯಕ್ಷರಾಗಿ ಶ್ರೀ ರಾಧಾಕೃಷ್ಣ ರೈ ಮಕ್ಕಳಿಗೆ ಶುಭಹಾರೈಸಿದರು.
ಶ್ರೀಮತಿ ಲತಾ ಕುಮಾರಿ ಸ್ವಾಗತಿಸಿ, ಶ್ರೀಮತಿ ಶೈನಿ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ವೀಣಾ ಜೋಷಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಸಾಮೂಹಿಕ ಗೀತೆಗಳನ್ನು ಹಾಡಿ ಕ್ರಾರ್ಯಕ್ರಮ ಚಂದಗಾಣಿಸಿಕೊಟ್ಟರು.