QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

ದಿನಾಂಕ ೧೪.೧೨.೨೦೧೩ನೇ ಶನಿವಾರದಂದು ಶಾಲಾ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾಲಾ ಆಡಳಿತ ಮಂಡಳಿ ಸದಸ್ಯೆ ಡಾ.ಸುಲೇಖ ವರದರಾಜ್ ಮಾತನಾಡಿ, ಶಿಕ್ಷಣವೆಂದರೆ ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತವಾಗಿ ನೀಡುವ ಶಿಕ್ಷಣವಲ್ಲ. ಕೇವಲ ಪಠ್ಯಪುಸ್ತಕದಿಂದ ಪಡೆಯುವ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯವಿಲ್ಲ. ಅಂಕಗಳಿಗೆ ಸೀಮಿತವಾಗಿ ಪಡೆಯುವ ಶಿಕ್ಷಣದಿಂದ ಅವರ ಮುಂದಿನ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳಿಗೆ ಮಾನವತೆಯ ಕೌಶಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಪುರಸಭಾ ಅಧ್ಯಕ್ಷೆ ಶ್ರೀಮತಿ ವಾಣಿಶ್ರೀಧರ್ ಮಾತನಾಡಿ, ಮಕ್ಕಳಲ್ಲಿ ಹಲವಾರು ರೀತಿಯ ಪ್ರತಿಭೆಗಳಿವೆ. ಪಠ್ಯಪುಸ್ತಕದ ವಿದ್ಯಾಭ್ಯಾಸದೊಂದಿಗೆ ಅವರ ಪ್ರತಿಭೆಗಳನ್ನು ಅರಳಿಸುವ ಸೂಕ್ತ ಮಾರ್ಗದರ್ಶನ ನೀಡಬೇಕು. ಶಾಲಾ ವಿದ್ಯಾಭ್ಯಾಸದೊಂದಿಗೆ ಉತ್ತಮ ಜೀವನ ಪದ್ದತಿಗಳನ್ನು ಆಧರಿಸಿಕೊಂಡು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಅವರ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಿ ಇತರರಿಗೂ ಮಾರ್ಗದರ್ಶಕರಾಗಬೇಕು ಎಂದರು.

ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಶಾಲಾ ಸಂಚಾಲಕ ರವೀಂದ್ರ.ಪಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್.ಎಂ.ಎಸ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಶರಣ್.ಪಿ, ಉಪನಾಯಕಿ ಶ್ರುತಾ.ಪಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಂ.ಕೃಷ್ಣ ಭಟ್ ಸ್ವಾಗತಿಸಿದರು. ಮುಖ್ಯಗುರು ಸತೀಶ್ ಕುಮಾರ್ ರೈ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಸಿಂಧು ಬಹುಮಾನಿತರ ಪಟ್ಟಿ ಓದಿದರು. ವಿದ್ಯಾರ್ಥಿಗಳಾದ ಅನೀಶ್.ಕೆ ಮತ್ತು ನಮೃತ ನಾಯಕ್, ಶಿಕ್ಷಕಿಯರಾದ ವಿದ್ಯಾ ಅನಿಲ್, ರೇಖಾ, ವೀಣಾ ಜೋಶಿ, ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿ, ಪ್ರೌಢಶಾಲಾ ವಿದ್ಯಾರ್ಥಿಸಂಘದ ನಾಯಕ ಸಾಕ್ಷಾತ್ ರೈ ವಂದಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 

IMG_0014

 

IMG_0013

 

IMG_0012

 

IMG_0011

 

IMG_0010

 

IMG_0009

 

IMG_0008

 

IMG_0007

 

IMG_0006

 

IMG_0005

 

IMG_0004

 

IMG_0015