ದಿನಾಂಕ. 30.06.2014 ರ ಸೋಮವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರ ಸಭೆಯನ್ನು ನಡೆಸಲಾಯಿತು. ಪ್ರಸಕ್ತ ವರ್ಷದ ಹೊಸ ಪಠ್ಯಕ್ರಮಕ್ಕೆ ಅನುಸಾರವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕಲಿಕಾ ರೀತಿ-ನೀತಿಯನ್ನು ಸವಿವರವಾಗಿ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪೋಷಕರಿಗೆ ತಿಳಿಸಿದರು ಹಾಗೂ ಅವರ ಅನೇಕ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು. ಅನಂತರ 2014-2015ರ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಂಘಕ್ಕೆ ಪ್ರತಿನಿಧಿಗಳನ್ನು ಆರಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದ ಪೋಷಕರ ಸಭೆಯ ಅಧ್ಯಕ್ಷರಾದ ಡಾ| ಪ್ರಸನ್ನ ಹೆಬ್ಬಾರ್ರವರು ಸಹಕಾರದ ನುಡಿಗಳನ್ನು ಆಡಿದರು ಹಾಗೂ ಶಿಕ್ಷಣದ ಬಗ್ಗೆ ಇತರ ಅನೇಕ ವಿಚಾರಗಳನ್ನು ತಿಳಿಸಿದರು. ಸಭೆಯ ಸಭಾಧ್ಯಕ್ಷರಾದ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್ ಇವರು ಮಾತನಾಡಿ ಹೊಸ ಶಿಕ್ಷಣ ಪದ್ಧತಿಯನ್ನು ಎಲ್ಲರೂ ಸ್ವೀಕರಿಸಿ, ಸಹಕರಿಸಿ ಎಂದು ಕರೆ ನೀಡಿದರು. ಶಿಕ್ಷಕರಾದ ಶ್ರೀ ರಾಧಾಕೃಷ್ಣ ರೈ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.