ದಿನಾಂಕ 21-07-2014 ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಮಳೆ ನೀರ ಕೊಯ್ಲಿನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಿವಿಲ್ ಇಂಜಿನಿಯರಿಂಗ್, ಎಂ.ಐ.ಟಿ. ಮಣಿಪಾಲ ಇದರ ಮುಖ್ಯಸ್ಥರು ಪ್ರೊ| .ನಾರಾಯಣ ಶೆಣೈ ಇವರು ಮಾತನಾಡುತ್ತಾ, ನಮ್ಮ ದೇಶದ ಮೇಲೆ ಸರಾಸರಿ 1170 ಮೀ ಮಳೆ ಬೀಳುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ದೇಶಗಳಲ್ಲಿ ಭಾರತ ಎರಡನೆಯದು. ದೈವದತ್ತವಾದ ಜಲ ಸಂಪಬ್ಧರಿತ ದೇಶ ನಮ್ಮದು ಆದರೆ ದೇಶದ ಹೆಚ್ಚಿನ ಭಾಗಗಳಲ್ಲಿ ನೀರೇ ದೊರಕದಂತಹ ಸ್ಥಿತಿ ಇರುವುದು ಕಳವಳಕಾರಿ ಎಂದು ಹೇಳಿದರು.
ಶಾಲಾ ಸಂಚಾಲಕ ರವೀಂದ್ರ.ಪಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಕೆ.ಎಂ.ಕೃಷ್ಣ ಭಟ್ ಅಧ್ಯಕರು ವಿವೇಕಾನಂದ ವಿದ್ಯಾಸಂಸ್ಥೆಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಕೋಶಾಧಿಕಾರಿ ಶ್ರೀ ಅಚ್ಯುತ್ ನಾಯಕ್, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ನಿರ್ದೇಶಕ ಶ್ರೀ ಗುಣಪಾಲ ಜೈನ್, ವಿವೇಕಾನಂದ ಡಿ.ಎಡ್ ಕಾಲೇಜು, ಪುತ್ತೂರು, ಇದರ ಉಪನ್ಯಾಸಕ ಶ್ರೀ ರಘುರಾಜ, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಹಾಗೂ ಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಪವಿತ್ರ ಪ್ರಾರ್ಥಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮರ್ ರೈ ಧನ್ಯವಾದ ಗೈದರು. ಶ್ರೀಮತಿ ಸುಗೀತ ರೈ ಮತ್ತು ಕು.ಪೂರ್ಣಲತ ಕಾರ್ಯಕ್ರಮ ನಿರೂಪಿಸಿದರು.