ದಿನಾಂಕ. 11-7-2014 ರ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿಯ ಪೋಷಕರ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ವಹಿಸಿ, ಮಾತನಾಡುತ್ತಾ ಮಕ್ಕಳಿಗೆ ಜ್ಞಾನವನ್ನು ತುರುಕುವುದಲ್ಲ ಅವರಲ್ಲಿರುವ ಜ್ಞಾನವನ್ನು ಹೊರತೆಗೆಯುವ ಪ್ರಯತ್ನ ಅಗತ್ಯ, ಮಾತ್ರವಲ್ಲ ಜೀವನವನ್ನು ಅನುಭವಿಸಿ ತಿಳಿಯದೆ ಇದ್ದರೆ ಅಂತಹ ಶಿಕ್ಷಣ ವ್ಯರ್ಥವೆಂದು ನುಡಿದರು. ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವರ್ಗ ಪ್ರಮುಖರಾದ ಶ್ರೀಮತಿ ಭಾರತಿ.ಜಿ ಹಾಗೂ ತರಗತಿ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು 4ನೇ ತರಗತಿಯ ಆಶ್ರಯ ಮತ್ತು ಸಂಗಡಿಗರು ಪ್ರಾರ್ಥನೆ ಮೂಲಕ ಪ್ರಾರಂಭಿಸಿ ಶಿಕ್ಷಕಿ ಶ್ರೀಮತಿ ಅಕ್ಷತಾ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ನವಿತಾ ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಶ್ರೀಮತಿ ಲತಾ ಕಾರ್ಯಕ್ರಮ ನಿರೂಪಿಸಿದರು.