ದಿನಾಂಕ. 24-7-2014 ರ ಶುಕ್ರವಾರ ನಮ್ಮ ಶಾಲೆಯಲ್ಲಿ ೩ನೇ ತರಗತಿಯ ಪೋಷಕರ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ವಹಿಸಿ, ಮಾತನಾಡುತ್ತಾ ಮಕ್ಕಳಲ್ಲಿ ಕನಸನ್ನು ಬಿತ್ತುವ ಕೆಲಸವಾಗಬೇಕಾಗಿದೆ, ಆ ಮೂಲಕ ಮಗುವಿನಲ್ಲಿ ಸ್ಪರ್ಧೆ, ಪರೀಕ್ಷೆಯ ಭಯವನ್ನು ಮಕ್ಕಳಲ್ಲಿ ಕನಸನ್ನು ವಿಕಸನಗೊಳಿಸುವ ಶಿಕ್ಷಣ ಅಗತ್ಯವಿದೆ ಎಂದು ನುಡಿದರು. ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವರ್ಗ ಪ್ರಮುಖರಾದ ಶ್ರೀಮತಿ ಭಾರತಿ.ಜಿ ಹಾಗೂ ತರಗತಿ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು 3 ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ಮೂಲಕ ಪ್ರಾರಂಭಿಸಿ ಶಿಕ್ಷಕಿ ಶ್ರೀಮತಿ ಶ್ವೇತಾ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅಕ್ಷಿತಾ ವಂದಿಸಿದರು. ಶಿಕ್ಷಕ ಶ್ರೀ ಎನ್.ಸಿ.ನಾಕ್ ಕಾರ್ಯಕ್ರಮ ನಿರೂಪಿಸಿದರು.