ದಿನಾಂಕ. 4-8-2014 ರ ಸೋಮವಾರ ನಮ್ಮ ಶಾಲೆಯ ಸಭಾಂಗಣದಲ್ಲಿ ೪ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬದ ಬಗೆಗಿನ ಪಾಠಕ್ಕೆ ಸಂಬಂಧಪಟ್ಟ ಕಾರ್ಯಾಗಾರದಲ್ಲಿ ವಿಟ್ಲ ಅರಮನೆಯ ಸದಸ್ಯರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಆದ ಶ್ರೀಯುತ ಮಹೇಶ್ ಬಲ್ಲಾಳರು ಇಂದಿನ ಸುಸ್ಥಿರ ಸಮಾಜಕ್ಕೆ ಅವಿಭಕ್ತ ಕುಟುಂಬ ಪೂರಕವೆಂದು ನುಡಿದರು. ತಮ್ಮ ಮನೆಯಲ್ಲಿ 96 ಮಂದಿ ಸದಸ್ಯರಿದ್ದು ಇಂದಿಗೂ ಒಟ್ಟಾಗಿ ಇದ್ದು ಹಬ್ಬಹರಿದಿನಗಳಂದು ಎಲ್ಲರೂ ಸಂತೋಷದಿಂದ ಆಚರಿಸುತ್ತೇವೆ.
ಮುಖ್ಯ ಅತಿಥಿಯಾಗಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಭಾಸ್ಕರ್ ಗೌಡ ಮಾತನಾಡಿ ಒಂದೇ ಮನೆಯಲ್ಲಿ ಅಜ್ಜ, ಅಜ್ಜಿ, ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ ಹೀಗೆ ಕುಟುಂಬದ ಸದಸ್ಯರು ಒಟ್ಟಿಗೆ ಸೇರಿ ನಡೆಸುವ ಜೀವನವೇ ಶ್ರೇಷ್ಠ ಜೀವನ ಎಂದು ನುಡಿದರು. ಶಾಲಾ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತಿರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಾರ್ಥನೆ ಮೂಲಕ ಪ್ರಾರಂಭಿಸಿ, ಶಿಕ್ಷಕ ಶ್ರೀ ಎನ್.ಸಿ.ನಾಕ್ ಕಾರ್ಯಕ್ರಮ ನಿರೂಪಿಸಿದರು.