ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಿಶೋರವರ್ಗ ಬಾಲಕಿಯರ ಮತ್ತು ಬಾಲವರ್ಗ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಗುಲ್ಬರ್ಗಾದ ಸೇಡಂನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ. ಅಲ್ಲದೆ ಕಿಶೋರ ವರ್ಗದ ಬಾಲಕರು ಮತ್ತು ಬಾಲವರ್ಗ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತದೆ. ಕಿಶೋರವರ್ಗದ ಬಾಲಕಿಯರಲ್ಲಿ ಕವನ ಬಿ.ಎಸ್, ಅಕ್ಷತಾ ಶೆಟ್ಟಿ, ದೀಕ್ಷಾ ಎ.ಎಸ್, ಶಿವಾನಿ ಬಂಗೇರ, ನಿರೀಕ್ಷಾ ಜೆ.ಕೆ ಹಾಗೂ ಬಾಲವರ್ಗದ ಬಾಲಕಿಯರಲ್ಲಿ ಪಂಚಮಿ ಸರ್ಪಂಗಳ, ಶ್ರೀದೇವಿ ಕೋಟೆ, ಶಮಾ ಕೆ. ಶುಭಶ್ರೀ ಕೆ., ಜಿ.ಜೆ. ಚಿತ್ತಾರ ಹಿರಿಂಜ ಪ್ರಶಸ್ತಿ ಪಡೆದ ಚದುರಂಗ ಸ್ಪರ್ಧಿಗಳಾಗಿರುತ್ತಾರೆ.