QR Code Business Card

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಚ್ಛಭಾರತ ಅಭಿಯಾನ

ದಿನಾಂಕ 02-10-2014 ರ ಗುರುವಾರದಂದು ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಛಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಯುವ ಉದ್ಯಮಿ ಕೆ.ಎಸ್.ಅರ್ಜುನ್, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಸಮಾಜಕ್ಕೆ ನಾವೇನಾದರೂ ಕೊಡಬೇಕು. ಮನಸ್ಸು ಎಷ್ಟು ನಿರ್ಮಲವಾಗಿದೆಯೋ, ನಮ್ಮ ಸುತ್ತಲ ಪರಿಸರವು ಸ್ವಚ್ಛತೆಯಿಂದ ಇರಬೇಕು ಎಂದು ಹೇಳಿದರು.

1

2

3

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ| ಕೆ.ಎಂ ಕೃಷ್ಣ ಭಟ್ ವಹಿಸಿ, ಮಾತನಾಡಿ, ಮುಂದಿನ ಭಾರತ ಯುವಕರ ಭಾರತ. ಸ್ವಯಂ ಪ್ರೇರಣೆಯಿಂದ ಸ್ವಚ್ಛಭಾರತವನ್ನಾಗಿ ಮಾಡಲು ಇಂದಿನ ಕಾರ್ಯಕ್ರಮ ಪೂರಕವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ರಘುಪತಿ ರಾಘವ ರಾಜಾರಾಂ ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ, ಕನ್ನಡ ಮಾಧ್ಯಮದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಇವರು ಸ್ವಾಗತಿಸಿ, ಆಂಗ್ಲ ಮಾಧ್ಯಮದ ಮುಖ್ಯಗುರುಗಳಾದ ಸತೀಶ್ ಕುಮಾರ್ ರೈ ಇವರು ವಂದಿಸಿದರು. ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿವಿಧ ತಂಡಗಳು ಪುತ್ತೂರು ಪುರಸಭೆ ವ್ಯಾಪ್ತಿಯ ಕರ್ಮಲ, ಶ್ರೀ ಸತ್ಯನಾರಾಯಣ ಕಟ್ಟೆ ಬಪ್ಪಳಿಗೆ, ತೆಂಕಿಲ, ಪರ್ಲಡ್ಕ, ದರ್ಬೆ ಮೊದಲಾದ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಸಿಕೊಂಡರು.