QR Code Business Card

ಶಿಕ್ಷಕರ ಕಾರ್ಯಾಗಾರ

ತಾರೀಕು 22-11-2014 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು.

ಶೋಭಾ ಕೊಳತ್ತಾಯ ಸದಸ್ಯರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಧ್ಯಯನ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಆಸೆ ಚಿಗುರುವಂತೆ ಮಾಡಬೇಕಾಗುವುದು ಶಿಕ್ಷಕನ ಆಧ್ಯತೆ ಆಗಬೇಕು ಎಂದು ಶುಭಹಾರೈಸಿದರು.

DSCN2103

ಹರೀಶ್ ಶಾಸ್ತ್ರಿ ಭೌತಶಾಸ್ತ್ರ ಉಪನ್ಯಾಸಕರು ವಿವೇಕಾನಂದ ಕಾಲೇಜು ಪುತ್ತೂರು ಅತಿಥಿಗಳಾಗಿ ಆಗಮಿಸಿ ಅಧ್ಯಾಪಕರು, ಹೆತ್ತವರು ಮತ್ತು ಮಕ್ಕಳ ನಡುವೆ ಸಾಮರಸ್ಯತೆಯಿಂದ ಇದ್ದು ಶಿಕ್ಷಣ ಮುಂದುವರಿಸಲು ಸೂಕ್ತ ವೇದಿಕೆ ನಿರ್ಮಿಸುವಂತಾಗಬೇಕು, ವೃತ್ತಿ ಪ್ರಾಮಣಿಕತೆಯಲ್ಲಿ ನೆಮ್ಮದಿ, ಶಾಂತತೆಯಿಂದ ಜೀವನ ಸುಂದರವಾಗುವುದೆಂದು ಹೇಳಿದರು.

ವೇದಿಕೆಯಲ್ಲಿ ಪ್ರಕಾಶ್.ಎಸ್.ಕೆ ಜೀವಶಾಸ್ತ್ರ ಉಪನ್ಯಾಸಕರು ವಿವೇಕಾನಂದ ಕಾಲೇಜು ಪುತ್ತೂರು, ಯಶವಂತ ಉಪನ್ಯಾಸಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು, ರವೀಂದ್ರ.ಪಿ, ಸಂಚಾಲಕರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಆಶಾ ಬೆಳ್ಳಾರೆ ಮುಖ್ಯಗುರುಗಳು ಕನ್ನಡ ಮಾಧ್ಯಮ ಶಾಲೆ ಪುತ್ತೂರು, ಸತೀಶ್ ಕುಮಾರ್ ರೈ ಮುಖ್ಯಗುರುಗಳು ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಉಪಸ್ಥಿತರಿದ್ದರು.

ಶಿಕ್ಷಕಿ ಭಾರತಿ.ಜಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಕುಮಾರಿ ವಂದಿಸಿದರು. ಶಿಕ್ಷಕಿ ಲತಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.