ಪುಸ್ತಕದ ಮಹತ್ವವನ್ನು ಅರಿತು ಜ್ಞಾನ ನಿಧಿಯನ್ನು ವಿದ್ಯಾರ್ಥಿಗಳಿಗೆ ಜನ ಸಾಮಾನ್ಯರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪುಸ್ತಕ ಜಾಥಾದ 2 ನೇ ಜಾಥಾವು ಬೊಳ್ವಾರು ಆಂಜನೇಯ ಮಂತ್ರಾಲಯದ ಆವರಣದಲ್ಲಿ ಶ್ರೀಯುತ ನಾರಾಯಣ ಮಣಿಯಾಣಿ ಉದ್ಘಾಟಿಸಿದರು. ನಗರ ಸಭೆಯ ಅಧ್ಯಕ್ಷರು ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಈ ಜಾಥಾವು ಆಂದೋಲನವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ನರೇಂದ್ರ ಮತ್ತು ನಾಗೇಂದ್ರ ಅತಿಥಿಗಳಾಗಿ ಭಾಗವಹಿಸಿ ಹಾರೈಸಿದರು. ಜಾಥಾವು ಬೊಳ್ವಾರಿನಿಂದ, ಮಂಜಲಡ್ಪು, ನೆಹರುನಗರ, ಮುರ, ಬನ್ನೂರು, ಹಾರಾಡಿ, ಪಡೀಲು ಮಾರ್ಗವಾಗಿ ಸಾಗಿತು.




ಜಾಥಾದಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಾದ ರಾಧಾಕೃಷ್ಣ ರೈ, ಮಂಜುನಾಥ, ಮಮತಾ, ಭಾರತಿ.ಎಸ್.ಎ, ವಾಣಿಶ್ರೀ, ಅನುರಾಧ, ಸೌಮ್ಯಕುಮಾರಿ, ಭಾಸ್ಕರ್, ರೂಪ, ಚಂದ್ರಶೇಖರ ಇವರು ಭಾಗವಹಿಸಿದ್ದರು.