QR Code Business Card

ವಿವೇಕಾನಂದ ಆಂಗ ಮಾಧ್ಯಮಕ್ಕೆ ರಾಜ್ಯಮಟ್ಟದ NTSE ಪರೀಕ್ಷೆಯಲ್ಲಿ 44 ನೇ ರ್‍ಯಾಂಕ್

IMG_0002ಪುತ್ತೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಅಮಿತ್ ಕುಮಾರ್ ಎಂ, 2014-15 ನೇ ಸಾಲಿನ ರಾಜ್ಯ ಮಟ್ಟದ ಎನ್.ಟಿ.ಎಸ್.ಇ. ಪರೀಕ್ಷೆಯಲ್ಲಿ 44 ನೇ ರ್‍ಯಾಂಕ್ ಪಡೆದಿರುತ್ತಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನವೆಂಬರ್ 2014 ರಲ್ಲಿ ನಡೆದ ಈ ಪರೀಕ್ಷೆಯಲ್ಲಿ ಒಟ್ಟು 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಮಂಗಳೂರು ನಗರ ಹೊರತು ಪಡಿಸಿ ಉತ್ತೀರ್ಣರಾದ ಏಕೈಕ ವಿದ್ಯಾರ್ಥಿಯಾಗಿದ್ದಾನೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (NTSE) ಬೆಂಗಳೂರು ನಡೆಸುವ ಈ ಪರೀಕ್ಷೆಯಲ್ಲಿ 10-05-2015 ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪರೀಕ್ಷೆ ಬರೆಯಲು ಅರ್ಹತೆಯನ್ನು ಪಡೆದಿದ್ದಾನೆ.

ಈತ ಬನ್ನೂರು ಈಶ್ವರ ನಾಯ್ಕರವರ ಪುತ್ರ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.