ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಜುಲೈ 25 ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.
ಬಿ.ವಿ. ಸೂರ್ಯನಾರಾಯಣ ಆಂಗ್ಲ ಭಾಷಾ ಉಪನ್ಯಾಸಕರು, ಸ.ಪ.ಪೂ.ಕಾಲೇಜು ಪುತ್ತೂರು ಇವರು ಮಾತನಡುತ್ತಾ, ಕಾರ್ಗಿಲ್ ಎಂದರೆ ಕೋಟೆಯ ಕೇಂದ್ರ ಸ್ಥಾನ ಎಂದರ್ಥ. ನಾವು ಬೇರೆ ಬೇರೆ ಕಾರಣಗಳಿಗೆ ಕಣ್ಣೀರು ಸುರಿಸುತ್ತೇವೆ. ಆದ್ದರಿಂದ ಇವತ್ತು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹುತಾತ್ಮರಾದ ನಮ್ಮವರಿಗೆ ಒಂದು ದಿನವಾದರೂ ಅಶ್ರುತರ್ಪಣ ಅರ್ಪಿಸುವುದು ಸೂಕ್ತ ಎಂದರು.
ರಾಧಾಕೃಷ್ಣ ರೈ, ಹಿರಿಯ ಶಿಕ್ಷಕರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ರವಿ ಮುಂಗ್ಲಿಮನೆ, ಅಧ್ಯಕ್ಷರು ಶಿಕ್ಷಕ – ರಕ್ಷಕ ಸಂಘ, ಸಂದರ್ಭೋಚಿತವಾಗಿ ಮಾತನಾಡಿದರು.
ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರು ಪ್ರೌಢಶಾಲಾ ವಿಭಾಗ, ರಾಮನಾಕ್ ಮುಖ್ಯೋಪಾಧ್ಯಾಯರು ಪ್ರಾಥಮಿಕ ವಿಭಾಗ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕ ವೆಂಕಟೇಶ್ ಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹತ್ತನೇ ತರಗತಿಯ ಕು. ರಕ್ಷಿತಾ ವಂದಿಸಿದರು.